SHIVAMOGGA LIVE NEWS | 23 AUGUST 2023 ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
SHIMOGA : ಆಟೋ ಮೀಟರ್ ಕಡ್ಡಾಯಗೊಳಿಸಿದ್ದರೂ ನಗರದಲ್ಲಿ ಮೀಟರ್ ಹಾಕದೆ ಆಟೋ ಚಲಾಯಿಸುತ್ತಿದ್ದ ಚಾಲಕರಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ನಗರದ ವಿವಿಧೆಡೆ ಸಂಚಾರ ಠಾಣೆ ಪೊಲೀಸರು ತಪಾಸಣೆ ನಡೆಸಿದರು. ಪ್ರಯಾಣಿಕರು ಇರುವ ಆಟೋಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದರು. ಆಟೋದಲ್ಲಿ ಮೀಟರ್ ಹಾಕಲಾಗಿದೆಯೇ ಇಲ್ಲವೆ ಎಂದು ಪರೀಕ್ಷಿಸಿದರು. ಅಲ್ಲದೆ ಪ್ರಯಾಣಿಕರನ್ನು ಕೂಡ ಪೊಲೀಸರು ಪ್ರಶ್ನಿಸಿದರು.
ಇದನ್ನೂ ಓದಿ – ಶಿವಮೊಗ್ಗ ಕಾಂಗ್ರೆಸ್ ಕಚೇರಿ ಈಗ ಫುಲ್ ರಶ್, ಸರ್ಕಾರ ರಚನೆ ಬೆನ್ನಿಗೆ ಶುರುವಾಯ್ತು 3 ಚಾಲೆಂಜ್, ಏನೇನು?
ಗೋಪಿ ವೃತ್ತದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಖುದ್ದು ಪರಿಶೀಲನೆ ನಡೆಸಿದರು. ಈ ವೇಳೆ ಮೀಟರ್ ಹಾಕದ ಆಟೋ ಚಾಲಕರಿಗೆ ಎಚ್ಚರಿಕೆ ನೀಡಲಾಯಿತು. ಇನ್ಮುಂದೆ ನಗರದಲ್ಲಿ ಕಡ್ಡಾಯವಾಗಿ ಮೀಟರ್ ಬಳಸಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.