Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಅಡಕೆ ಸಾಗಣೆಗೆ 6 ಗೈಡ್ ಲೈನ್ ಪ್ರಕಟಿಸಿದ ಶಿವಮೊಗ್ಗ ಪೊಲೀಸ್, ಏನದು? ಕಾರಣವೇನು?

ಅಡಕೆ ಸಾಗಣೆಗೆ 6 ಗೈಡ್ ಲೈನ್ ಪ್ರಕಟಿಸಿದ ಶಿವಮೊಗ್ಗ ಪೊಲೀಸ್, ಏನದು? ಕಾರಣವೇನು?

30/11/2022 8:58 AM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 30 NOVEMBER 2022

ಶಿವಮೊಗ್ಗ : ಸಾಗರ ಅಡಕೆ ಕಳ್ಳತನ ಪ್ರಕರಣದ ಬೆನ್ನಿಗೆ ಪೊಲೀಸ್ ಇಲಾಖೆ ಅಡಕೆ ರಕ್ಷಣೆ ಕುರಿತು ಮಹತ್ವದ ಸಭೆ ನಡೆಸಿದೆ. ಅಲ್ಲದೆ ಆರು ಮಾರ್ಗಸೂಚಿಯನ್ನು (Guideline for Adike) ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

 

ಇವತ್ತಿನ ನ್ಯೂಸ್‌
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

Shimoga Nanjappa Hospital

ಶಿವಮೊಗ್ಗ ಎಪಿಎಂಸಿಯಲ್ಲಿ ಅಡಕೆ ವರ್ತಕರ ಸಂಘದ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ವರ್ತಕರ ಜೊತೆ ಸಭೆ ನಡೆಸಿದರು. ಅಡಕೆ ಮೇಲೆ ಕಳ್ಳರ ಕಣ್ಣು ಬೀಳದಂತೆ ನಿಯಂತ್ರಿಸಲು ವಿವಿಧ ಕಠಿಣ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಬಳಿಕ ಆರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಸಾಗರ ಅಡಕೆ ಕಳವು ಪ್ರಕರಣದ ಬೆನ್ನಿಗೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

(Guideline for Adike)

ಏನಿದು ಸಾಗರದ ಅಡಕೆ ಕಳವು ಕೇಸ್?

ಇತ್ತೀಚೆಗೆ, ಸಾಗರದ ಬಳಸಗೋಡು ಗ್ರಾಮದ ಮಧುಕರ್ ಎಂಬುವವರು ತಮ್ಮ ಗೋಡೋನ್ ನಿಂದ LIC-HOME-NEW-ADVT24,500 ಕೆ.ಜಿ ತೂಕದ 350 ಚೀಲ ಅಡಕೆಯನ್ನು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಕಳುಹಿಸಿದ್ದರು. ಅಡಕೆ ಹೊತ್ತು ಸಾಗಿದ್ದ ಲಾರಿ ನಾಪತ್ತೆಯಾಗಿತ್ತು. ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 22 ದಿನ ತನಿಖೆ ನಡೆಸಿದ ಪೊಲೀಸರು, ಮದ್ಯಪ್ರದೇಶದಲ್ಲಿ ಮೂವರು ಆರೋಪಿಗಳನ್ನು ಲಾರಿ ಮತ್ತು ಅಡಕೆ ಸಹಿತ ವಶಕ್ಕೆ ಪಡೆದಿದ್ದರು.

ಮದ್ಯಪ್ರದೇಶದ ರಜಾಕ್ ಖಾನ್ ಅಲಿಯಾಸ್ ಸಲೀಂ ಖಾನ್ (65), ಥೇಜು ಸಿಂಗ್ (42), ಅನೀಸ್ ಅಬ್ಬಾಸಿ (55) ಬಂಧಿತರು. 1.17 ಕೋಟಿ ರೂ. ಮೊತ್ತದ ಕೆಂಪು ಅಡಕೆಯನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳ ಬಂಧನದ ಬಳಿಕ ಅವರು ಅಂತಾರಾಜ್ಯ ಕಳ್ಳರು ಎಂಬುದು ಗೊತ್ತಾಗಿತ್ತು.

adike theft at sagara

(Guideline for Adike)

ಅಡಕೆ ಸಾಗಣೆ ಮೇಲೆ ನಿಗಾ

ಸಾಗರದಲ್ಲಿ ಕೋಟಿ ರೂ. ಮೌಲ್ಯದ ಅಡಕೆಯನ್ನು ವಶಕ್ಕೆ ಪಡೆದ ಬೆನ್ನಿಗೆ ಪೊಲೀಸ್ ಇಲಾಖೆ ಅಡಕೆ ಸಾಗಣೆ ಮೇಲೆ ನಿಗಾ ವಹಿಸಿದೆ. ಅಡಕೆ ವರ್ತಕರ ಜೊತೆ ಸಭೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು 8 ಮಾರ್ಗ ಸೂಚಿ ಪ್ರಕಟಿಸಿದ್ದಾರೆ.

ಮಾರ್ಗಸೂಚಿ 1 – ಅಡಕೆ ಮಂಡಿಗಳ ಮಾಲೀಕರು ಮುಂಜಾಗೃತಾ ಕ್ರಮವಾಗಿ ಮಂಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು.

https://chat.whatsapp.com/KChu2C1bGTM2v9HmZlfIkSಮಾರ್ಗಸೂಚಿ 2 – ಅಡಕೆ ಸಾಗಾಣೆ ಮಾಡುವ ಮುಂಚೆ ವಾಹನಗಳ ಚಾಲಕರು ಮತ್ತು ಸಹಾಯಕರುಗಳ ಪೂರ್ವಾಪರ ಪರಿಶೀಲಿಸಬೇಕು. ಅವರ ಮಾಹಿತಿ ಖಚಿತ ಪಡಿಸಿಕೊಂಡ ನಂತರವೇ ಸಾಗಾಟ ಮಾಡಬೇಕು.

ಮಾರ್ಗಸೂಚಿ 3 – ಮಂಡಿಗಳಲ್ಲಿ ಸಂಗ್ರಹಿಸಿರುವ ಮತ್ತು ಸಾಗಾಟ ಮಾಡುವ ಅಡಕೆಗೆ ವಿಮೆ ಮಾಡಿಸಬೇಕು.

ಮಾರ್ಗಸೂಚಿ 4 – ಅಡಕೆ ಸಾಗಾಟ ಮಾಡುವಾಗ ಟ್ರಾನ್ಸ್ ಪೋರ್ಟ್ ಏಜನ್ಸಿ ಮತ್ತು ಮಾಲೀಕರ ಪೂರ್ವಾಪರ ಪರಿಶೀಲಿಸಿಕೊಳ್ಳಬೇಕು.

ALSO READ – ಅಡಕೆ ಧಾರಣೆ | 29 ನವೆಂಬರ್ 2022 | ಎಲ್ಲೆಲ್ಲಿ ಎಷ್ಟಿದೆ ಅಡಕೆ ರೇಟ್?

ಮಾರ್ಗಸೂಚಿ 5 – ಅಡಕೆ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕು. ಅಥವಾ ಜಿಪಿಎಸ್ ಅಳವಡಿಸಿರುವ ವಾಹನಗಳಲ್ಲಿಯೇ ಅಡಕೆ ಸಾಗಾಟ ಮಾಡಬೇಕು.

Meeting with adike market apmc

ALSO READ – ಎಲೆ ಚುಕ್ಕೆ, ತೀರ್ಥಹಳ್ಳಿಯ ತೋಟಕ್ಕೆ ಸಿಎಂ ಭೇಟಿ, ಇಲ್ಲಿದೆ ಬೊಮ್ಮಾಯಿ ಹೇಳಿದ 3 ಪ್ರಮುಖಾಂಶ

ಮಾರ್ಗಸೂಚಿ 6 – ಯಾವುದೇ ಸಂಶಯ ಕಂಡುಬಂದಲ್ಲಿ ಅಥವಾ ತುರ್ತು ಸಹಾಯಕ್ಕಾಗಿ ಹತ್ತಿರದ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ – 9480803300 ಗೆ ಕರೆ ಮಾಡಬಹುದು. ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಬಹುದು.

Shimoga Nanjappa Hospital

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article 301122 Mobile Theft case at Sagara Police Station ಕದ್ದ ಕೆಲವೇ ಗಂಟೆಯಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ, 1 ಫೋನ್ ಕದ್ದವನ ಬಳಿ ಸಿಕ್ತು 8 ಫೋನ್
Next Article 301122 BY Raghavendra press meet in shimoga ಶರಾವತಿ ಸಂತ್ರಸ್ಥರ ವಿಚಾರ, ಕಾಂಗ್ರೆಸ್‌ಗೆ 3 ಪ್ರಶ್ನೆ ಕೇಳಿದ ಸಂಸದ ರಾಘವೇಂದ್ರ

ಇದನ್ನೂ ಓದಿ

ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 12 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
12/06/2025
hakti-cars-pvt-ltd-shimoga-Toyota-showroom
SHIVAMOGGA CITY

ಶಿವಮೊಗ್ಗದಲ್ಲಿ 2 ದಿನ ಕಾರು ಎಕ್ಸ್‌ಚೇಂಜ್‌ ಮೇಳ, ರೈತರು, ಸರ್ಕಾರಿ ನೌಕರರು, ಕಾರ್ಪೊರೇಟ್‌ ಉದ್ಯೋಗಿಗಳಿಗೆ ಭರ್ಜರಿ ಆಫರ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Tree-cuttion-row-in-Shimoga-city
SHIVAMOGGA CITY

ರಾತ್ರೋರಾತ್ರಿ ಕಾರಿನಲ್ಲಿ ಬಂದು ಫುಟ್‌ಪಾತ್‌ ಮೇಲಿದ್ದ ಮರಕ್ಕೆ ಗರಗಸ ಹಾಕಿದ ದುಷ್ಕರ್ಮಿಗಳು, ಒಬ್ಬ ಅರೆಸ್ಟ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 11 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Rain-in-Shimoga-city-today
SHIVAMOGGA CITY

ಶಿವಮೊಗ್ಗ ಸಿಟಿಯಲ್ಲಿ ಗಾಳಿ ಸಹಿತ ಜೋರು ಮಳೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
-Monkey-catches-mobile-phone-at-Nanjappa-Hospital
SHIVAMOGGA CITY

ಶಿವಮೊಗ್ಗದಲ್ಲಿ ಯುವತಿಯ ಮೊಬೈಲ್‌ ಕದ್ದ ಮಂಗ, ಒಂದು ಗಂಟೆ ಮರವೇರಿ ಕುಳಿತು ಪ್ರಹಸನ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Previous Next
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?