SHIVAMOGGA LIVE NEWS | CRIME | 23 ಏಪ್ರಿಲ್ 2022
ಶಿವಮೊಗ್ಗದ ಕ್ಲಬ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಜೂಜಾಡುತ್ತಿದ್ದ ಮಾಜಿ ಕಾರ್ಪೊರೇಟರ್ ಮತ್ತು ಕಾರ್ಪೊರೇಟರ್ ಒಬ್ಬರ ಪತಿ ಸೇರಿದಂತೆ 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಕ್ಲಬ್ ಒಂದರಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಆರೋಪದ ಹಿನ್ನೆಲೆ ಕಳೆದ ರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ. ಕ್ಲಬ್’ನ ವಿವಿಧ ಟೇಬಲ್’ಗಳಲ್ಲಿ ಜೂಜಾಡುತ್ತಿದ್ದ 40 ಮಂದಿ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಪೊಲೀಸರು 1.15 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದವರ ಪೈಕಿ ಒಬ್ಬರು ಮಾಜಿ ಕಾರ್ಪೊರೇಟರ್ ಮತ್ತು ಕಾರ್ಪೊರೇಟರ್ ಒಬ್ಬರ ಪತಿ ಇದ್ದರು. ಈ ಇಬ್ಬರು ಸೇರಿ 40 ಮಂದಿ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ನಡು ರಸ್ತೆಯಲ್ಲೇ ಕೆಟ್ಟು ನಿಂತ ಬಸ್, ನೆಹರು ರೋಡಲ್ಲಿ ವಾಹನ ಸವಾರರಿಗೆ ಪೀಕಲಾಟ