ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ 112 ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಉಳಿಯಿತು ಅಪ್ರಾಪ್ತೆಯ ಪ್ರಾಣ, ಆಗಿದ್ದೇನು?

SHIVAMOGGA LIVE NEWS | 29 AUGUST 2023

SHIMOGA : ನಗರದ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಗಾಜಿನ ಚೂರಿನಿಂದ ಕೈ ಕೊಯ್ದುಕೊಂಡಿದ್ದ ಅಪ್ರಾಪ್ತೆಯನ್ನು (Minor 112 ಇಆರ್‌ಎಸ್‌ಎಸ್‌ ವಾಹನದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

290823-Police-Help-a-girl-at-freedom-park.

17 ವರ್ಷದ ಬಾಲಕಿಯೊಬ್ಬಳು ಫ್ರೀಡಂ ಪಾರ್ಕ್‌ನಲ್ಲಿ ಗಾಜಿನ ಚೂರಿನಿಂದ ಏಕಾಏಕಿ ಕೈ ಕೊಯ್ದುಕೊಂಡಿದ್ದಾಳೆ. ಇದನ್ನು ಗಮನಿಸಿದ ಇಆರ್‌ಎಸ್‌ಎಸ್‌ ವಾಹನದ ವಿನೋಬನಗರ ಠಾಣೆ ಕಾನ್ಸ್‌ಟೇಬಲ್‌ ಎಸ್‌.ಕೆ.ರಾಘವೇಂದ್ರ ಮತ್ತು ಚಾಲಕ ಬಿ.ಎಸ್.ಚನ್ನೇಶ್‌ ಕೂಡಲೆ ಬಾಲಕಿಯನ್ನು ರಕ್ಷಿಸಿದ್ದಾರೆ. ಇಆರ್‌ಎಸ್‌ಎಸ್‌ ವಾಹನದಲ್ಲಿಯೇ ಆಕೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದು, ಸಕಾಲದಲ್ಲಿ ಚಿಕಿತ್ಸೆ ಲಭಿಸಿದೆ.

ಇದನ್ನೂ ಓದಿ- ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದಲ್ಲಿ ಮಹಿಳೆಯಿಂದ ಠಾಣೆಗೆ ದೂರು | 3 ಫಟಾಫಟ್‌ ನ್ಯೂಸ್‌

ಅಪ್ರಾಪ್ತೆಯು ಕೈ ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಲು ನಿಖರ ಕಾರಣ ತಿಳಿದು ಬಂದಿಲ್ಲ. ಇಆರ್‌ಎಸ್‌ಎಸ್‌ ವಾಹನದ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಪ್ರಶಂಸಿಸಿದ್ದಾರೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 29, 2023 at 11:30 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 29, 2023

Leave a Comment