ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಚರಂಡಿಗೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು ಮತ್ತು ಗುಂಡಿಗಳನ್ನು (Pot Hole) ಮುಚ್ಚಲು ಅಧಿಕಾರಿಗಳು ಆಸಕ್ತಿ ತೋರದ ಹಿನ್ನೆಲೆ, ಖಾಸಗಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕೆರೆಯಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸಂಚಾರ ಮತ್ತು ಪ್ರಯಾಣಿಕರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಖಾಸಗಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ದೊಡ್ಡ ಗುಂಡಿಗಳಾಗಿವೆ. ತಿಂಗಳುಗಳೆ ಕಳೆದರೂ ಈ ಗುಂಡಿಗಳನ್ನು ಮುಚ್ಚುವ ಪ್ರಯತ್ನವಾಗಿಲ್ಲ. ನಗರದಲ್ಲಿ ಮಳೆ ಆಗುತ್ತಿರುವುದರಿಂದ ಈ ಗುಂಡಿಗಳಲ್ಲಿ ನೀರು ನಿಂತು ಸಣ್ಣ ಕೆರೆಯಂತಾಗಿದೆ.
ಗುಂಡಿಗಳು ಇರುವುದರಿಂದ ಬಸ್ಸುಗಳು ನಿಧಾನವಾಗಿ ಚಲಿಸುತ್ತವೆ. ಅಶೋಕ ಸರ್ಕಲ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ದಿಢೀರ್ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನು, ಪ್ರಯಾಣಿಕರು ಮಳೆ ನೀರು ನಿಂತ ಗುಂಡಿ ದಾಟಿ ಬಸ್ ನಿಲ್ದಾಣದೊಳಗೆ ಹೋಗಲು ಕಷ್ಟಪಡಬೇಕಾಗಿದೆ.
ಗುಂಡಿಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಖಾಸಗಿ ಬಸ್‌ಗಳ ಸಿಬ್ಬಂದಿ ಮತ್ತು ಸಂಚಾರ ಪೊಲೀಸರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದರು. ಆದರೆ ಈ ತನಕ ಪರಿಹಾರ ಕಂಡಿಲ್ಲ. ಇತ್ತ ಸಂಚಾರ ಪೊಲೀಸರೆ ಮಣ್ಣು, ಕಲ್ಲು ತರಿಸಿ ಗುಂಡಿ ಮಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಬಸ್ಸುಗಳು ನಿರಂತರವಾಗಿ ಓಡಾಡುವುದರಿಂದ ಮಣ್ಣು, ಕಲ್ಲು ಇಲ್ಲಿ ನಿಲ್ಲುವುದಿಲ್ಲ ಅನ್ನುತ್ತಾರೆ ಬಸ್ ಚಾಲಕರು. ಹಾಗಾಗಿ ನಿಲ್ದಾಣದ ಮುಂದಿನ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಬೇಕಿದೆ. ಇಲ್ಲವಾದಲ್ಲಿ ಮಳೆ ಹೆಚ್ಚಿದಂತೆ ಸಮಸ್ಯೆ ಹೆಚ್ಚಾಗಲಿದೆ.
ಇದನ್ನೂ ಓದಿ – ‘ಶಿವಮೊಗ್ಗದಿಂದ ಮೊದಲು ಈ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ’, ಸರ್ಕಾರಕ್ಕೆ ಒತ್ತಾಯ, ಕಾರಣವೇನು?