ಸಂಸದರ ಭೇಟಿಗೂ ಮುಂಚೆ ತುಂಗಾ ನದಿ ಹೊಸ ಸೇತುವೆ ಮೇಲಿನ ಗುಂಡಿಗಳು ಮಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022

ಶಿವಮೊಗ್ಗದ ತುಂಗಾ ನದಿ ಹೊಸ ಸೇತುವೆ ಮೇಲಿನ ಗುಂಡಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸೇತುವೆ ಮೇಲಿನ ಗುಂಡಿಗಳಿಗೆ ತೇಪೆ ಹಾಕಲಾಗಿದೆ. ಸದ್ಯ ವಾಹನ ಸವಾರರು ನಿರ್ಭೀತಿಯಿಂದ ಸಂಚರಿಸಬಹುದಾಗಿದೆ.

Nanjappa Hospital Covid care centre graphics

ತುಂಗಾ ನದಿ ಹೊಸ ಸೇತುವೆ ಮೇಲೆ ದೊಡ್ಡ ಗಾತ್ರದ ಗುಂಡಿಗಳಿದ್ದವು. ಇದು ವಾಹನ ಸವಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಗುಂಡಿಗಳಿಂದಾಗಿಯೇ ತುಂಗಾ ನದಿ ಹೊಸ ಸೇತುವೆ ಮೇಲೆ ಅಪಘಾತ ಸಂಭವಿಸುತ್ತಿತ್ತು.

ಶಿವಮೊಗ್ಗ ಲೈವ್’ನಲ್ಲಿ ವರದಿ ಪ್ರಕಟ

ತುಂಗಾ ನದಿ ಹೊಸ ಸೇತುವೆ ಮೇಲಿನ ದೊಡ್ಡ ಗುಂಡಿಗಳ ಕುರಿತು ಶಿವಮೊಗ್ಗ ಲೈವ್.ಕಾಂ ವರದಿಗಳನ್ನು ಪ್ರಕಟಿಸಿತ್ತು. ಈ ವರದಿ ಬೆನ್ನಿಗೆ ಅಧಿಕಾರಿಗಳು ಗುಂಡಿ ಮುಚ್ಚುವ ಕುರಿತು ತಿರ್ಮಾನ ಕೈಗೊಂಡಿದ್ದರು. ಶಿವಮೊಗ್ಗ ಲೈವ್’ನಲ್ಲಿ ಪ್ರಕಟವಾದ ವರದಿ ಇಲ್ಲಿದೆ » ತುಂಗಾ ನದಿ ಸೇತುವೆ ಮೇಲೆ ಇನ್ನೆಷ್ಟು ಜನರ ಬಲಿಗಾಗಿ ಕಾಯುತ್ತಿದ್ದಾರೆ ಅಧಿಕಾರಿಗಳು? | ದೂರು ದುಮ್ಮಾನ 

ಸಂಸದರ ಭೇಟಿ ಮೊದಲು ಗುಂಡಿ ಬಂದ್

ಇವತ್ತು ಸಂಸದ ಬಿ.ವೈ.ರಾಘವೇಂದ್ರ ಅವರು ವಿವಿಧ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಪರಿಶೀಲನೆ ನಡೆಸಿದರು. ವಿದ್ಯಾನಗರದಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನೂ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಂಸದರು ಹೊಸ ಸೇತುವೆ ಮೇಲೆ ಸಂಚರಿಸುವ ಸಾದ್ಯತೆ ಕುರಿತು ಮಾಹಿತಿ ಲಭಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಗುಂಡಿಗಳಿಗೆ ಡಾಂಬಾರು ತುಂಬಿದ್ದಾರೆ. ಭಾನುವಾರ ಮಧ್ಯಾಹ್ನದ ವೇಳೆಗೆ ಗುಂಡಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ | ನಾಲ್ಕು ರೈಲ್ವೆ ಮೇಲ್ಸೇತುವೆ, ಶಿವಮೊಗ್ಗ ಸಂಸದರಿಂದ ಕಾಮಗಾರಿ ಪರಿಶೀಲನೆ, ಎಲ್ಲೆಲ್ಲಿ ಎಷ್ಟಾಗಿದೆ ಕೆಲಸ?

ಸದ್ಯ ತುಂಗಾ ನದಿ ಹೊಸ ಸೇತುವೆ ಮೇಲೆ ವಾಹನ ಸವಾರರು ನಿರಾಳವಾಗಿ ಸಂಚರಿಸಬಹುದಾಗಿದೆ.

Shimoga Live News Graphics Age Wise Reach

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment