ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ನಗರದ ಎನ್.ಟಿ.ರಸ್ತೆಯಲ್ಲಿರುವ ಬೈಪಾಸ್ ರಸ್ತೆಯ ಸರ್ಕಲ್ ಗುಂಡಿಮಯವಾಗಿದೆ (Pot Holes). ದ್ವಿಚಕ್ರ ವಾಹನ ಸವಾರರ ಪಾಲಿಗಂತು ಈ ಗುಂಡಿಗಳು ಯಮ ಸ್ವರೂಪಿಯಾಗಿ ಕಾಣಿಸುತ್ತಿವೆ.
ಎನ್.ಟಿ.ರಸ್ತೆ ಮತ್ತು ಬೈಪಾಸ್ ರಸ್ತೆ ಸೇರುವ ಸ್ಥಳದಲ್ಲಿರುವ ಸರ್ಕಲ್‌ನಲ್ಲಿ ಬೃಹತ್ ಗುಂಡಿಗಳು ಬಾಯ್ತೆರೆದಿವೆ. ಮೂರು ದಿಕ್ಕಿಂದ ಬರುವ ವಾಹನಗಳು ಈ ಗುಂಡಿಗಳನ್ನು ಹಾದು ಹೋಗಬೇಕಿದೆ. ಇಲ್ಲಿ ಸ್ವಲ್ಪ ಯಾಮಾರಿದರು ಅಪಘಾತ ನಿಶ್ಚಿತ.
ಇದನ್ನೂ ಓದಿ – ಅಕೌಂಟ್‌ಗೆ 79 ಸಾವಿರ ರೂ. ಹಾಕುತ್ತೇವೆ ಅಂದರು, ನಂತರ ಬಂದ SMS ನೋಡಿ ನಿವೃತ್ತ ಉದ್ಯೋಗಿಗೆ ಶಾಕ್
ಗುಂಡಿಗಳಿಂದ ಗಂಡಾಂತರ
ನಿತ್ಯ ನೂರಾರು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳು, ಹಲವು ಲಾರಿಗಳು ಸೇರಿದಂತೆ ಸಾವಿರಾರು ವಾಹನಗಳು ಈ ಸರ್ಕಲ್ ಹಾದು ಹೋಗುತ್ತವೆ. ಭಾರಿ ವಾಹನಗಳ ಸಂಚಾರದಿಂದಾಗಿ ಗುಂಡಿಗಳ ಗಾತ್ರ ಮತ್ತು ಆಳ ದಿನೇ ದಿನೆ ಹೆಚ್ಚುತ್ತಿದೆ. ಈ ಗುಂಡಿ ಹಾದು ಹೋಗುವಾಗ ಬಸ್ಸುಗಳೇ ಅತ್ತಿಂದಿತ್ತ ವಾಲಡುತ್ತವೆ. ಇನ್ನು ದ್ವಿಚಕ್ರ ವಾಹನ ಸವಾರರಿಗಂತು ಈ ಗುಂಡಿಗಳು ಜವರಾಯನ ದರ್ಶನ ಮಾಡಿಸುತ್ತಿವೆ.
ವೇಗವಾಗಿ ಬಂದರೆ ಅಪಘಾತ ಫಿಕ್ಸ್
ಎನ್.ಟಿ.ರಸ್ತೆ ಮತ್ತು ಬೈಪಾಸ್ ರಸ್ತೆಯ ತಿರುವಿನಲ್ಲೇ ಬೃಹತ್ ಗುಂಡಿಯಾಗಿದೆ. ವಾಹನಗಳು ವೇಗವಾಗಿದ್ದರೆ ಗುಂಡಿಗಿಳಿದರೂ ಅಪಘಾತ, ಗುಂಡಿ ತಪ್ಪಿಸಲು ಹೋದರೂ ಅವಘಡ ಉಂಟಾಗುತ್ತದೆ. ಇದೆ ರೀತಿ ಸರ್ಕಲ್ ಮಧ್ಯದಲ್ಲಿನ ಬೃಹತ್ ಗುಂಡಿ ಕೂಡ ಅಪಘಾತವನ್ನು ಆಹ್ವಾನಿಸುತ್ತಿದೆ. ಈಗಾಗಲೆ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಗುಂಡಿಗಳಿಂದಾಗಿ ರಸ್ತೆ ಮೇಲೆಲ್ಲ ಜೆಲ್ಲಿ ಕಲ್ಲು ಹರಡಿಕೊಂಡಿದೆ. ವಾಹನಗಳು ಸ್ಕಿಡ್ ಆಗಲು ಇವು ಕಾರಣವಾಗುತ್ತಿವೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಪ್ರಗತಿ ಪರಿಶೀಲನೆ, ಸಭೆಯಲ್ಲಿ ಚರ್ಚೆಯಾದ 7 ಪ್ರಮುಖಾಂಶ ಇಲ್ಲಿದೆ