ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 8 SEPTEMBER 2024 : ಮಳೆಗಾಲ ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರದ ರಸ್ತೆಗಳಲ್ಲಿ ಪಾತಾಳ ಕಾಣುವಂತಹ ಗುಂಡಿಗಳು (Pot Holes) ಸೃಷ್ಟಿಯಾಗಿವೆ. ವಾಹನ ಸವಾರರ ಪಾಲಿಗೆ ಇವು ಅಕ್ಷರಶಃ ಮೃತ್ಯು ಕೂಪವಾಗಿವೆ. ಕಳೆದ ತಿಂಗಳು ಶಿವಮೊಗ್ಗ ನಗರದಲ್ಲಿ ಮಳೆಯಾಗುತ್ತಿದ್ದಂತೆ ನಾಯಿ ಕೊಡೆಗಳಂತೆ ಗುಂಡಿಗಳು ಪ್ರತ್ಯಕ್ಷವಾಗಿವೆ. ಹೆದ್ದಾರಿಯಿಂದ ಹಿಡಿದು ಕಿರುದಾರಿವರೆಗೆ ಡಾಂಬಾರು ಕಿತ್ತು ಬಂದು, ಅಡಿ ಲೆಕ್ಕದ ಆಳದ ಗುಂಡಿ ಬಿದ್ದಿವೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ರೈಲ್ವೆ ನಿಲ್ದಾಣ ಸಮೀಪದ ಕೆಇಬಿ ಸರ್ಕಲ್ನಲ್ಲಿ ಮತ್ತೆ ಗುಂಡಿಯಾಗಿದೆ. ಮಳೆಗಾಲಕ್ಕೆ ಮೊದಲಷ್ಟೆ ಈ ಗುಂಡಿಗಳ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಅದರ ಬೆನ್ನಿಗೆ ಅವುಗಳನ್ನು ಬಂದ್ ಮಾಡಲಾಗಿತ್ತು. ಈಗ ಪುನಃ ಗಜಗಾತ್ರದ ಗುಂಡಿಗಳಾಗಿವೆ. ರೈಲು ಇಳಿದು ಶಿವಮೊಗ್ಗದ ಸೊಬಗು ಸವಿಯಲು ಬರುವವರಿಗೆ, ಮೊದಲು ಸ್ವಾಗತಿಸುವುದೇ ಈ ಗುಂಡಿಗಳು.» ಊರಿಗೆ ಬಂದವರಿಗೆ ‘ಗುಂಡಿಯ ಸ್ವಾಗತʼ
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರೈಲು ನಿಲ್ದಾಣದ ಕಡೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಗೆ ತಿರುವು ಪಡೆಯುವಲ್ಲಿ ಎರಡು ಬೃಹತ್ ಗುಂಡಿಗಳಾಗಿವೆ. ಇವುಗಳನ್ನು ತಪ್ಪಿಸಿ ವಾಹನಗಳನ್ನು ಚಲಾಯಿಸುವುದು ಅಸಾಧ್ಯ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೆ ಕೈ, ಕಾಲು ಮುರಿದುಕೊಳ್ಳುವುದು ನಿಶ್ಚಿತ. ಇನ್ನು, ರಸ್ತೆಯ ಮತ್ತೊಂದು ಬದಿಯಲ್ಲು ಸಿಗ್ನಲ್ ಬಿಟ್ಟ ನಂತರ ವಾಹನಗಳು ಗುಂಡಿ ದಾಟಿಯೇ ಮುಂದೆ ಹೋಗಬೇಕು.
ನೆತ್ತರು ಹೀರಲು ಕಾದಿದೆ ಚರಂಡಿ
ಒಂದೆಡೆ ಗುಂಡಿಗಳ ಸಮಸ್ಯೆಯಾದರೆ ಮತ್ತೊಂದೆಡೆ ರೈಲ್ವೆ ನಿಲ್ದಾಣದ ಕಡೆಯಿಂದ ಬರುವಾಗ ಸಿಗುವ ಸಿಗ್ನಲ್ನಲ್ಲಿರುವ ಚರಂಡಿಯ ಮುಚ್ಚಳ ಹಾನಿಯಾಗಿದೆ. ಈಗಾಗಲೇ ಅದು ಭಾಗಶಃ ಹಾಳಾಗಿದೆ. ಅಪ್ಪಿತಪ್ಪಿ ಯಾವುದಾದರೂ ವಾಹನ ಇಲ್ಲಿ ಹಾದು ಹೋದರೆ ಅಪಘಾತ ಕಟ್ಟಿಟ್ಟ ಬುತ್ತಿ. ಇದೆ ಕಾರಣಕ್ಕೆ ವಾಹನ ಸವಾರರನ್ನು ಎಚ್ಚರಿಸಲು ಇಲ್ಲಿನ ಆಟೋ ಚಾಲಕರು, ಅಕ್ಕಪಕ್ಕದ ಅಂಗಡಿಯವರು ಸಣ್ಣದೊಂದು ಗಿಡ ಕಿತ್ತು ತಂದು ಇಟ್ಟಿದ್ದಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯ ಓಡಾಡುವ ರಸ್ತೆ ಇದು. ಆದರೆ ಈ ಗುಂಡಿಗಳನ್ನು ತೆರವು ಮಾಡಿ, ಜನರ ಸಂಕಷ್ಟ ದೂರ ಮಾಡುವ ಯೋಚನೆ ಮಾಡದಿರುವುದು ವಿಪರ್ಯಾಸ.
ಇದನ್ನೂ ಓದಿ » ಸಾವಿರ ಕೋಟಿಯ ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಓಡಾಡುವಾಗ ಎಚ್ಚರ.. ಎಚ್ಚರ.., ಯಾಕೆ ಗೊತ್ತಾ?