ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ವರ್ಷಗಳಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಗುಂಡಿಗಳೆಲ್ಲ ಪ್ರಧಾನಿ ಭೇಟಿ ಹಿನ್ನೆಲೆ ಬಂದ್ ಆಗಿವೆ. ಜನರು ಹಲವು ಬಾರಿ ಬೇಡಿಕೊಂಡರೂ ಗುಂಡಿ ಮುಚ್ಚಿಸದ ಅಧಿಕಾರಿಗಳು ಈಗ ತರಾತುರಿಯಲ್ಲಿ ಡಾಂಬಾರು ಸುರಿಸುತ್ತಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮಾ.18ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ (ಫ್ರೀಡಂ ಪಾರ್ಕ್) ಕಾರಿನಲ್ಲಿ ತೆರಳಲಿದ್ದಾರೆ. ಅವರು ತೆರಳುವ ಮಾರ್ಗದುದ್ದಕ್ಕು ಇದ್ದ ಗುಂಡಿಗಳ ದಿಢೀರ್ ಕಾಣೆಯಾಗಿವೆ.
ಡಾಂಬರೀಕರಣ ಆರಂಭ, ಹಂಪ್ಗಳು ಮಾಯ
ಸಹ್ಯಾದ್ರಿ ಕಾಲೇಜು ಮುಂಭಾಗದಿಂದ ವಿದ್ಯಾನಗರದ ವೃತ್ತಾಕಾರದ ಸೇತುವೆವರೆಗು ರಸ್ತೆಯ ಎರಡು ಬದಿಯಲ್ಲೂ ಹತ್ತಾರು ಗುಂಡಿಗಳಿದ್ದವು. ಅಲ್ಲಲ್ಲಿ ಡಾಂಬಾರ್ ಕಿತ್ತು ಹೋಗಿತ್ತು. ಇದು ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದವು. ಈ ಗುಂಡಿಗಳನ್ನು ಮುಚ್ಚುವಂತೆ ಸ್ಥಳೀಯರು, ವಾಹನ ಸವಾರರು ಒತ್ತಾಯಿಸಿದ್ದರು. ಮಾಧ್ಯಮಗಳಲ್ಲಿಯು ವರಿದಯಾಗಿತ್ತು. ಆದರೆ ಆಗ ಕ್ಯಾರೆ ಅನ್ನದ ಅಧಿಕಾರಿಗಳು, ಈಗ ತರಾತುರಿಯಲ್ಲಿ ಗುಂಡಿಗಳನ್ನು ಮುಚ್ಚಿಸುತ್ತಿದ್ದಾರೆ. ರಸ್ತೆಗೆ ಅಲ್ಲಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಎಂಆರ್ಎಸ್ ಸರ್ಕಲ್ ಸಮೀಪ ಎನ್ಸಿಸಿ ಅಧಿಕಾರಿಗಳ ವಸತಿ ಗೃಹದ ಗೇಟ್ ಮುಂಭಾಗ ಇದ್ದ ಹಂಪ್ಗಳನ್ನು ತೆರವು ಮಾಡಲಾಗಿದೆ.
ಪ್ರಧಾನಿ ಭೇಟಿ ವೇಳೆಗಷ್ಟೆ ಮುತುವರ್ಜಿ
ಬಿ.ಹೆಚ್.ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸಲಿವೆ. ಇವುಗಳನ್ನು ಮುಚ್ಚಿಸುವಂತೆ ಜನರ ಒತ್ತಡವಿದ್ದರೂ, ಅಧಿಕಾರಿಗಳು ಗುಂಡಿಗಳತ್ತ ಕಣ್ಣು ಹಾಯಿಸಿರಲಿಲ್ಲ. ಈಗ ಪ್ರಧಾನಿ ಮೋದಿ ಭೇಟಿ ವೇಳೆ ಅಧಿಕಾರಿಗಳು ತೀವ್ರ ಮುತುವರ್ಜಿಯಿಂದ ಗುಂಡಿಗಳನ್ನು ಹುಡುಕಿ ಬಂದ್ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ ಕ್ಷೇತ್ರ, ನಾಮಪತ್ರ ಸಲ್ಲಿಕೆ ಯಾವಾಗ? ಮತದಾನದ ದಿನಾಂಕವೇನು?