ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದಲ್ಲಿ ಸಂಜೆ ವೇಳೆಗೆ ಜೋರು ಮಳೆ ಸುರಿಯಿತು. ಇದರ ಬೆನ್ನಿಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಕಳೆದ ಕೆಲವು ದಿನಗಳಿಂದ ಭಾರಿ ಬಿಸಿಲು ಹಾಗೂ ವಿಪರೀತ ಧಗೆಯಿಂದ ಹೈರಾಣಾಗಿದ್ದ ಜನರಿಗೆ ಮಳೆ ತುಸು ಸಮಾಧಾನ ನೀಡಿದೆ. ಆದರೆ ಹೊರಗೆ ತಾಪಮಾನ ತುಸು ತಗ್ಗಿದ್ದು, ಕಟ್ಟಡಗಳ ಒಳಗೆ ಧಗೆ ಮುಂದುವರಿದಿದೆ.

ಸಂಜೆ ವೇಳೆಗೆ ಮಳೆ ದಿಢೀರ್ ಆರಂಭವಾಗಿದ್ದು ರಸ್ತೆ ಬದಿ ಹಾಗೂ ದಾರಿ ಮಧ್ಯೆ ಸಿಲುಕಿದ ಸಾರ್ವಜನಿಕರು ಮಳೆಯಿಂದ ರಕ್ಷಣೆ ಪಡೆಯಲು ಕಟ್ಟಡಗಳ ಅಡಿ ಹಾಗೂ ಮಳಿಗೆಗಳ ಮುಂದೆ ಆಶ್ರಯ ಪಡೆದರು.
ಇನ್ನು ಮಳೆ ಆರಂಭವಾಗುತ್ತಿದ್ದಂತೆ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಕರೆಂಟ್ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸಿದರು.