ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನವೆಂಬರ್‌ 21ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಬಡಾವಣೆಗಳ‌ ಲಿಸ್ಟ್

ಶಿವಮೊಗ್ಗ: ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನ.21 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ನಗರದ ಹಲವು ಕಡೆ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶ್ವರನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ, ಎಂ.ಆರ್.ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿ.ಹೆಚ್.ರಸ್ತೆ (ಗ್ರಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹಮದ್ ವೃತ್ತದವರೆಗೆ), ಬಾಲ್‌ರಾಜ್ ಅರಸು ರಸ್ತೆ (ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ).

ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ ಸರ್.ಎಂ.ವಿ.ರಸ್ತೆ, (ವೀರಭದ್ರೇಶ್ವರ ಟಾಕೀಸ್‌ನಿಂದ ಮಹಾವೀರ್ ವೃತ್ತದವರೆಗೆ), (ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ). ಗಾಂಧಿಪಾರ್ಕ್, ಲೂರ್ದು ನಗರ, ಕಾನ್ವಂಟ್ ರಸ್ತೆ, ಬಾಪೂಜಿನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್. ಬಡಾವಣೆ, ಜೋಸೆಫ್ ನಗರ, ಟ್ಯಾಂಕ್ ಬೌಂಡ್ ರಸ್ತೆ, ಕುವೆಂಪು ರಂಗಮಂದಿರ, ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತ.

Nanjappa Hospital Advertisement

ಮೀನಾಕ್ಷಿ ಭವನ, ಶಂಕರಮಠ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಬಾಲರಾಜ್ ಅರಸ್ ರಸ್ತೆ, ಮೆಹದಿ ನಗರ, ಬಾಪೂಜಿನಗರ, ಬಸವನಗುಡಿ, ವಿನಾಯಕ ಪಾರ್ಕ್, ವಿನಾಯಕನಗರ, ಅಮೀರ್ ಅಹಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಕಚೇರಿ, ಆರ್.ಟಿ.ಓ.ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇನ್ನು, ನ.21ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಕೋಟೆ ರಸ್ತೆ, ಅಶೋಕರಸ್ತೆ, ಗಾಂಧಿಬಜಾರ್, ಓಬಿಎಲ್ ರಸ್ತೆ, ಲಷ್ಕರ್ ಮೊಹಲ್ಲಾ, ಸಾವರ್ಕರ್ ನಗರ, ಬಿ.ಹೆಚ್.ರಸ್ತೆ, ತಿರುಪಳಯ್ಯನ ಕೇರಿ, ಸೊಪ್ಪಿನ ಮಾರುಕಟ್ಟೆ, ಕೆ.ಆರ್.ಪುರಂ, ಭರಮಪ್ಪ ನಗರ, ಎಂ.ಕೆ.ಕೆ.ರಸ್ತೆ, ನಾಗಪ್ಪ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ » ಮೊಬೈಲ್‌ ಸರ್ವಿಸ್‌ ಸೆಂಟರ್‌ ಬೀಗ ಒಡೆದ ಕಳ್ಳರು, ಏನೇನೆಲ್ಲ ಕದ್ದಿದ್ದಾರೆ?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment