ತುಂಗಾ ಸೇತುವೆ ಮೇಲಿನ ವಿದ್ಯುತ್‌ ಲೈನ್‌, ಕೇಬಲ್‌ ವೈರ್‌ಗಳು ತೆರವು, ಕಾರಣವೇನು?

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ 157 ವರ್ಷಗಳಷ್ಟು ಹಳೆಯ ತುಂಗಾ ಸೇತುವೆ ತೆರವು ಕಾರ್ಯಕ್ಕೆ ದಿನಗಣನೆ ಆರಂಭವಾಗಿದೆ. ಪೂರ್ವಭಾವಿಯಾಗಿ ಸೇತುವೆ ಮೇಲಿದ್ದ ವಿದ್ಯುತ್ ಕೇಬಲ್‌ಗಳನ್ನು ಇಂದು ತೆರವುಗೊಳಿಸುವ ಕಾರ್ಯ ನಡೆಯಿತು. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಲೋಕೋಪಯೋಗಿ ಇಲಾಖೆಯ ಮನವಿ ಮೇರೆಗೆ ಮೆಸ್ಕಾಂ ಸಿಬ್ಬಂದಿ, ಸೇತುವೆ ಮೇಲಿದ್ದ 11 ಕೆ.ವಿ. ಸಾಮರ್ಥ್ಯದ ನಾಲ್ಕು ವಿದ್ಯುತ್ ಕೇಬಲ್‌ಗಳನ್ನು ತೆರವು ಮಾಡಿ ಸ್ಥಳಾಂತರಿಸಿದರು. ಇನ್ನು ಟಿವಿ ಕೇಬಲ್‌, ಇಂಟರ್‌ನೆಟ್‌ ಕೇಬಲ್‌ ಅನ್ನು ಕೂಡ ತೆರವು ಮಾಡಲಾಯಿತು.

Electric-Wires-Shifted-from-Tunga-Bridge-in-Shivamogga

ಕುಡಿಯುವ ನೀರು ಹಾಗೂ ಒಳಚರಂಡಿ ಮಾರ್ಗಗಳನ್ನು ಸ್ಥಳಾಂತರಿಸುವಂತೆಯೂ ಸಂಬಂಧಪಟ್ಟ ಇಲಾಖೆಗಳಿಗೆ ಲೋಕೋಪಯೋಗಿ ಇಲಾಖೆ ಪತ್ರ ಬರೆದಿದೆ.

₹40 ಕೋಟಿ ವೆಚ್ಚದ ಯೋಜನೆ

ಶತಮಾನಕ್ಕೂ ಹಳೆಯದಾದ ಈ ಸೇತುವೆ ಬದಲಿಗೆ ₹40 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸಲು ಸಚಿವ ಸಂಪುಟ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ. ಪ್ರಸ್ತುತ ತಾಂತ್ರಿಕ ಅನುಮೋದನೆ ಪ್ರಕ್ರಿಯೆ ಬಾಕಿ ಇದ್ದು, ಶೀಘ್ರವೇ ಟೆಂಡರ್ ಕರೆಯಲು ಯೋಜಿಸಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: