ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 22 JUNE 2023
SHIMOGA : ವಿದ್ಯುತ್ ದರ (Electricity Price) ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ. ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಉದ್ಯಮಿಗಳು, ನೌಕರರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಎಂಆರ್ಎಸ್ ಸರ್ಕಲ್ನಲ್ಲಿ ಭಿತ್ತಿ ಪತ್ರ ಹಿಡಿದು ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುಶಕ್ತಿ ನಿಯಂತ್ರಣ ಆಯೋಗದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಇಂಡಸ್ಟ್ರಿಯಲ್ ಏರಿಯಾ, ಕೈಗಾರಿಕೆ ಸಂಘಟನೆಗಳ ಪ್ರದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಉದ್ಯಮಿಗಳ ಬೇಡಿಕೆಗಳೇನು?
ವಿದ್ಯುತ್ ದರದಲ್ಲಿನ ಫಿಕ್ಸೆಡ್ ಚಾರ್ಜ್, ವಿದ್ಯುತ್ ಶಕ್ತಿಯ ಯುನಿಟ್ ದರಗಳನ್ನ ಹಿಂದಿನ ಮಾದರಿಯಲ್ಲೆ ಮುಂದುವರೆಸಬೇಕು. ರಾಜ್ಯದಲ್ಲಿ ಜಲ ವಿದ್ಯುತ್ ಯೋಜನೆಗಳ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ತೈಲೋತ್ಪನ್ನಗಳ ಬಳಕೆಯಾಗುತ್ತಿಲ್ಲ. ಹಾಗಾಗಿ ವಿದ್ಯುತ್ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು. ವಿದ್ಯುತ್ ದರದ (Electricity Price) ಮೇಲಿನ ತೆರಿಗೆಯನ್ನು ಶೇ.9ರ ಬದಲು ಶೇ.3ಕ್ಕೆ ಇಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯಾರೆಲ್ಲ ಏನೇನು ಹೇಳಿದರು?
ಇದನ್ನೂ ಓದಿ – ವಿದ್ಯುತ್ ದರ ಹೆಚ್ಚಳ, ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಸಭೆ, MLA ಹೇಳಿದ್ದೇನು? ಉಳಿದವರ ಆರೋಪಗಳೇನು?
ಎಂಆರ್ಎಸ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ ಕೈಗಾರಿಕೋದ್ಯಮಿಗಳು ಹರಿಗೆ ಸಮೀಪ ಇರುವ ವಿದ್ಯುತ್ ಭವನದವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ದಿಢೀರ್ ಕೆಳಗೆ ಬಿದ್ದ ಬೃಹತ್ ರಾಷ್ಟ್ರಧ್ವಜ, ಆಟೋ ಚಾಲಕರಿಂದ ತ್ರಿವರ್ಣಕ್ಕೆ ಗೌರವ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422