ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಹಾಸನದ ಪೆನ್ ಡ್ರೈವ್ ವಿಚಾರದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಸಂಸದರ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು. ಎಸ್ಐಟಿ ತನಿಖೆ ವಿಚಾರದಲ್ಲಿ ನ್ಯಾಯಾಲಯದ ಮಧ್ಯ ಪ್ರವೇಶಿಸಬೇಕು. ಸಂತ್ರಸ್ತೆಯರಿಗೆ ಬೇಗ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಯಾರೆಲ್ಲ ಏನೆಲ್ಲ ಹೇಳಿದರು?
- ಕೆ.ಪಿ.ಶ್ರೀಪಾಲ್, ವಕೀಲ
‘ಪಾಳೆಗಾರರು, ರಾಜರ ಕಾಲದಲ್ಲಿ ಇಂತಹ ದೌರ್ಜನ್ಯ ನಡೆದಿರಬಹುದೇನೊ. ರಾಜ್ಯ ಸರ್ಕಾರ ಆರಂಭದ ಹಂತದಲ್ಲಿ ಪ್ರಕರಣದ ಕುರಿತು ಗಂಭೀರ ಕ್ರಮ ಕೈಗೊಳ್ಳಲಿಲ್ಲ. ಒಂದು ವರ್ಷದ ಹಿಂದೆಯೇ ಪ್ರಧಾನಿಗೆ ವಿಷಯ ಗೊತ್ತಿದ್ದರು ಮೌನ ವಹಿಸಿದ್ದರು. ಮಹಿಳೆಯನ್ನು ಮುಟ್ಟಿದರೆ ಸಾಕು ಕೂಡಲೆ ಬಂಧಿಸುತ್ತಾರೆ. ಹಾಸನದ ಪ್ರಕರಣದಲ್ಲಿ ಪ್ರಜ್ವಲ್ನನ್ನು ಬಂಧಿಸಿಲ್ಲ. ನ್ಯಾಯ ಎಲ್ಲರಿಗೂ ಒಂದೆ. ಎರಡು ಸರ್ಕಾರಗಳು ನೆಪಮಾತ್ರಕ್ಕೆ ಎಂಬಂತೆ ಕ್ರಮದ ಮಾತಾಡುತ್ತಿವೆ. ನ್ಯಾಯಾಲಯ ಕೂಡಲೆ ಮಧ್ಯ ಪ್ರವೇಶಿಸಬೇಕು. ಆರೋಪಿ ಬಂಧನವಾಗದೆ ಇದ್ದರೆ ಸಾಕ್ಷಿ ನಾಶ ಆಗಲಿದೆ.’
- ಪ್ರೊ. ರಾಜೇಂದ್ರ ಚೆನ್ನಿ, ಚಿಂತಕ
‘ಇತಿಹಾಸದಲ್ಲಿ ಕೇಳದಿರುವ ಲೈಂಗಿಕ ದೌರ್ಜನ್ಯದಲ್ಲಿ ಪ್ರಭಾವಿ ರಾಜಕಾರಣಿ ತೊಡಗಿದ್ದಾನೆ. ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡುತ್ತಿದೆ. ಇದರಿಂದ ಆ ಮಹಿಳೆಯರು ಹಿಂಸೆ ಅನುಭವಿಸುತ್ತಿದ್ದಾರೆ. ಅತ್ಯಂತ ತ್ವರಿತವಾಗಿ ಈ ಅಪರಾಧದ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜಕೀಯ ಒತ್ತಡ, ಪ್ರಭಾವಕ್ಕೆ ಒಳಗಾಗಬಾರದು. ಸಂತ್ರಸ್ತೆಯರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು. ರಾಜಕೀಯ, ಹಣ ಬಲದಿಂದ ಏನು ಬೇಕಿದ್ದರೂ ಮಾಡಬಹುದು ಎಂಬ ಧೋರಣೆಗೆ ತಮ್ಮ ವಿರೋಧವಿದೆ.’
- ಅಕ್ಷತಾ ಹುಂಚದಕಟ್ಟೆ, ಸಾಹಿತಿ
‘ಅಧಿಕಾರ ಬಳಸಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡಿರುವುದು ಹೀನ ಕೃತ್ಯ. ಆ ಮಹಿಳೆಯರು ಬದುಕು ನಡೆಸದಂತಾಗಿದೆ. ಆತನನ್ನು ಕೂಡಲೆ ಬಂಧಿಸಬೇಕು.’
ಇದನ್ನೂ ಓದಿ – ಶಿವಮೊಗ್ಗದಲ್ಲಿ ಪ್ರದೀಪ್ ಈಶ್ವರ್, ಕ್ಷೇತ್ರಕ್ಕೆ ರಾಘವೇಂದ್ರ ಕೊಡುಗೆ ಬಗ್ಗೆ ಸವಾಲು, ಅಣ್ಣಾಮಲೈಗೆ ಓಪನ್ ಚಾಲೆಂಜ್