SHIVAMOGGA LIVE NEWS | 21 FEBRURARY 2023
SHIMOGA : ಸವಳಂಗ ರಸ್ತೆಯ ಮೇಲ್ಸೇತುವೆ (Fly Over) ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿದೆ. ಇದರಿಂದ ಹಲವರ ಜೀವ ಮತ್ತು ಜೀವನಕ್ಕೆ ಕುತ್ತು ಉಂಟಾಗಿದೆ ಎಂದು ಆರೋಪಿಸಿ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿ ವೇದಿಕೆ ವತಿಯಿಂದ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸವಳಂಗ ರಸ್ತೆ ಮೆಲ್ಸೇತುವೆ (Fly Over) ಕಾಮಗಾರಿ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಂದಗತಿಯಲ್ಲಿ ಸಾಗುತ್ತಿದೆ ಕೆಲಸ
ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ 2022ರ ಫೆ.8ರಂದು ಆರಂಭವಾಯಿತು. ಇದೇ ವೇಳೆ ವಿದ್ಯಾನಗರ ಮತ್ತು ಸೋಮಿನಕೊಪ್ಪ ಮೇಲ್ಸೇತುವೆ ಕಾಮಗಾರಿಗಳು ಶರುವಾಯಿತು. ಅವೆರಡು ಕಾಮಗಾರಿಗಳಿಗೆ ಹೋಲಿಸಿದರೆ ಸವಳಂಗ ರಸ್ತೆಯ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಜನರು ತೀವ್ರ ಸಂಕಷ್ಟ ಅನುಭವಿಸಬೇಕಾಗಿದೆ ಎಂದರು ಆಕ್ರೋಶ ವ್ಯಕ್ತಪಡಿಸಿದರು.
ಪರ್ಯಾಯ ಮಾರ್ಗವೇ ಸೂಚಿಸಿಲ್ಲ
ಮೇಲ್ಸೇತುವೆ (Fly Over) ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗವನ್ನು ಸೂಚಿಸಿಲ್ಲ. ಇದರಿಂದ ಜನರು ನಿತ್ಯ ಪರದಾಡುವಂತಾಗಿದೆ. ರೈಲುಗಳು ಹೋದಾಗ ಗೇಟ್ ಹಾಕುವುದರಿಂದ ಬಹು ಹೊತ್ತು ವಾಹನ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಆಸ್ಪತ್ರೆಗೆ ಸೇರಿಸಲು ವಿಳಂಬವಾಯಿತು
ಈಚೆಗೆ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು ಪ್ರಾಂಶಪಾಲರಾದ ಪ್ರೊ. ಜಿ.ಆರ್.ಜಗದೀಶ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ರೈಲ್ವೆ ಗೇಟ್ ಬಳಿ ವಾಹನ ದಟ್ಟಣೆ ಉಂಟಾಗಿತ್ತು. ಇದರಿಂದ ಪ್ರೊ. ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸುಮಾರು 25 ವಿಳಂಬವಾಯಿತು. ಇದೆ ಕಾರಣಕ್ಕೆ ಅವರು ನಿಧನರಾಗಿದ್ದಾರೆ. ಇಂತಹ ಪರಿಸ್ಥಿತಿ ಮತ್ಯಾರಿಗೂ ಆಗಬಾರದು. ಆದ್ದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಇದನ್ನೂ ಓದಿ – ಅಗಲಿದ ಪ್ರಾಂಶುಪಾಲರಿಗೆ ಕಣ್ಣೀರ ವಿದಾಯ, ಘೋಷಣೆಯೊಂದಿಗೆ ಕಾಲೇಜು ಆವರಣದಲ್ಲಿ ಅಂತಿಮ ನಮನ
ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷೆ ಸ್ಮಿನ್ನು, ಉಪಾಧ್ಯಕ್ಷ ಪವನ್, ಕಾರ್ಯದರ್ಶಿ ಶರತ್ ಮಳವಳ್ಳಿ, ಸಹ ಕಾರ್ಯದರ್ಶಿ ದರ್ಶನ್, ಸದಸ್ಯರಾದ ಅರುಣ್, ಅಕ್ಷತಾ, ತೇಜುಕುಮಾರ್ ಸೇರಿದಂತೆ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.