SHIVAMOGGA LIVE NEWS | 16 JANUARY 2023
SHIMOGA : ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯವೆ ಉದ್ಯಮಿ (Business Man) ಶರತ್ ಭೂಪಾಳಂ ಸಾವಿಗೆ ಕಾರಣ ಎಂದು ಆರೋಪಿಸಿ ಉದ್ಯಮಿಗಳು, ಭೂಪಾಳಂ ಕುಟುಂಬದ ಸ್ನೇಹಿತರು, ಕಾರ್ಮಿಕರು ಮೆರವಣಿಗೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಿಂದ ದುರ್ಗಿಗುಡಿ, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಉದ್ಯಮಿ ಶರತ್ ಫೋಟೊದೊಂದಿಗೆ ಮೆರವಣಿಗೆ
ಅಗ್ನಿ ಅವಘಡದಲ್ಲಿ ಮೃತಪಟ್ಟ ಉದ್ಯಮಿ (Business Man) ಶರತ್ ಭೂಪಾಳಂ ಅವರ ಭಾವಚಿತ್ರವನ್ನು ಹಿಡಿದುಕೊಂಡು ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಹಾದಿ ಉದ್ದಕ್ಕೂ ಶರತ್ ಭೂಪಾಳಂ ಸಾವಿಗೆ ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯವೆ ಕಾರಣೆ ಎಂದು ಆಪಾದಿಸಿ, ನ್ಯಾಯಕ್ಕಾಗಿ ಅಗ್ರಹಿಸಿ ಘೋಷಣೆ ಕೂಗಲಾಯಿತು.
ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಇನ್ನು, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಶಿಧರ್ ಭೂಪಾಳಂ ಅವರು, ತಮ್ಮ ಮಗನ ಸಾವಿಗೆ ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ವಿವರಿಸಿದರು.
ಅಗ್ನಿಶಾಮಕ ಇಲಾಖೆಯಲ್ಲಿ ಎಲ್ಲಾ ಉಪಕರಣಗಳಿವೆ. ಆದರೆ ಅವುಗಳನ್ನ ಬಳಕೆ ಮಾಡದೆ ಹಾಗೆ ಇಟ್ಟುಕೊಂಡಿದ್ದಾರೆ. ಅವುಗಳ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಶರತ್ ಭೂಪಾಳಂ ಅವರ ಕುಟುಂಬ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ವಿವಿಧ ಸಂಘಟನೆಗಳ ಬೆಂಬಲ
ಮೆರವಣಿಗೆಯಲ್ಲಿ ಐಕ್ಯ ಮಹಿಳಾ ಸಂಘ, ಮಾಚೇನಹಳ್ಳಿ ಇಂಡಸ್ಟ್ರಿಯಲ್ ಅಸೋಸಿಯೇಷನ್, ಸಾಗರ ಇಂಡಸ್ಟ್ರಿಯಲ್ ಎಸ್ಟೇಟ್ ಅಸೋಸಿಯೇಷನ್, ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘ, ಆರ್ಯ ವೈಶ್ಯ ಬಡಾವಣೆ ದೇವಸ್ಥಾನ ಸಮಿತಿ, ಆರ್ಯ ವೈಶ್ಯ ಮಹಾಜನ ಸಮಿತಿ, ಅಡಕೆ ಮಂಡಿ ವರ್ತಕರ ಸಂಘ, ಶಿವಮೊಗ್ಗ ರೌಂಡ್ ಟೇಬಲ್, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಎನ್.ಇ.ಎಸ್. ಶಿಕ್ಷಣ ಸಂಸ್ಥೆ, ಶ್ರೀನಿಧಿ ಸಮೂಹ, ಗಾಂಧಿ ಬಜಾರ್ ವರ್ತಕರ ಸಂಘ, ಚಿನ್ನ ಬಳ್ಳಿ ವರ್ತಕರ ಸಂಘ, ಜವಳಿ ವರ್ತಕರ ಸಂಘ, ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್, ಜಿಲ್ಲಾ ಒಕ್ಕಲಿಗರ ಸಂಘ, ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ, ಕಲ್ಲೂರು ಮಂಡಲಿ ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಷನ್.
ಎಂಐಎ ಫೌಂಡರಿ ಕ್ಲಸ್ಟರ್, ಕಂಟ್ರಿ ಕ್ಲಬ್, ರೋಟರಿ ಕ್ಲಬ್, ಇನ್ನರ್ ವ್ಹೀಲ್, ಕನ್ನಿಕಾ ಮಹಿಳಾ ಸಂಘ, ವಾಸವಿ ಮಹಿಳಾ ಸಂಘ, ವಾಸವಿ ಯುವ ಜನ ಸಂಘ, ಐಸಿರಿ ಮಹಿಳಾ ಸಂಘ, ಗೆಳತಿ ಮಹಿಳಾ ಸಂಘ, ಶಾರದಾ ಮಹಿಳಾ ಸಂಘ, ಎಲೈಟ್ ಲೇಡಿಸ್ ಕ್ಲಬ್, ಶಿವಮೊಗ್ಗ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.
ಇದನ್ನೂ ಓದಿ – ಉದ್ಯಮಿ ಭೂಪಾಳಂ ಮನೆಯಲ್ಲಿ ಬೆಂಕಿ ಕೇಸ್, ಅಗ್ನಿಶಾಮಕ ವಿರುದ್ಧ ‘ಆರೋಪ ಪಟ್ಟಿ’ ರಿಲೀಸ್