ಟಿಪ್ಪು ನಗರದ ಮನೆ ಮೇಲೆ ತುಂಗಾ ನಗರ ಪೊಲೀಸರ ದಾಳಿ, ಮನೆಯಲ್ಲಿದ್ದವರು ಪರಾರಿ, ದಾಳಿಗೇನು ಕಾರಣ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 20 DECEMBER 2022

ಶಿವಮೊಗ್ಗ : ಖಚಿತ ಮಾಹಿತಿ ಮೇರೆಗೆ ಟಿಪ್ಪು ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, 40 ಕೆ.ಜಿ ದನದ ಮಾಂಸ (raid of beef) ವಶಕ್ಕೆ ಪಡೆದಿದ್ದಾರೆ.

Shimoga nanjappa hospital

ಟಿಪ್ಪು ನಗರದ ಶಾಮೀರ್ ಖಾನ್ ಎಂಬುವವರ ಮನೆಯಲ್ಲಿ ಗೋವುಗಳ ವಧೆ ಮಾಡಿ, ಮಾಂಸ (raid of beef) ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ತುಂಗಾ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ

ದಾಳಿ ವೇಳೆ ಮನೆಯಲ್ಲಿದ್ದ ಇಬಾದ್ ಮತ್ತು ಆತನ ಸಹಚರರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪರಿಶೀಲನೆ ವೇಳೆ ಮನೆಯ ಹಾಲ್ ನಲ್ಲಿ 40 ಕೆ.ಜಿಯಷ್ಟು ಗೋಮಾಂಸ ಪತ್ತೆಯಾಗಿದೆ. ಇದರ ಮೌಲ್ಯ 8 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shimoga Nanjappa Hospital

Leave a Comment