NEWS HIGHLIGHTS
SHIVAMOGGA LIVE NEWS | 14 DECEMBER 2022
ಶಿವಮೊಗ್ಗ : ನಗರದ ಕ್ಲಬ್ (raid on club) ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕ್ಲಬ್ ನ ಮ್ಯಾನೇಜರ್ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು

ಡಿ.ವಿ.ಎಸ್. ಸರ್ಕಲ್ ಸಮೀಪ ಇರುವ ರೋವರ್ಸ್ ಕ್ಲಬ್ (raid on club) ಮೇಲೆ ಕಳೆದ ರಾತ್ರಿ ದಾಳಿ ನಡೆಸಲಾಗಿದೆ. ಕ್ಲಬ್ ನಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಕೋಟೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಗ್ಗಲು ಹಿಡಿದ ಅಡಕೆ, ಮುಳುಗಿದ ಭತ್ತದ ಗದ್ದೆ, ತಾಲೂಕುವಾರು ನಡೆಯುತ್ತಿದೆ ಸಮೀಕ್ಷೆ
ಜೂಜಾಟದಲ್ಲಿ ತೊಡಗಿದ್ದ 11 ಮಂದಿ ಮತ್ತು ರೋವರ್ಸ್ ಕ್ಲಬ್ ಮ್ಯಾನೇಜರ್ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ. ಈ ವೇಳೆ 1.53 ಲಕ್ಷ ರೂ. ನಗದು ಮತ್ತು ಇಸ್ಪೀಟ್ ಕಾರ್ಡುಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ:➤ ಸಿಎಂ ಜೊತೆಗೆ ಶಿವಮೊಗ್ಗ ಡಿಸಿ ವಿಡಿಯೋ ಕಾನ್ಫರೆನ್ಸ್, ಬಳಿಕ ದಿಢೀರ್ ಮೀಟಿಂಗ್, ಏನಂದ್ರು ಜಿಲ್ಲಾಧಿಕಾರಿ?
CLICK & JOIN – SHIVAMOGGA LIVE COMMUNITY