ಶಿವಮೊಗ್ಗದಲ್ಲಿ ರೈಲ್ವೆ ಹಿತರಕ್ಷಣಾ ಸಭೆ | ಎರಡು ತಿಂಗಳು ಮಸಾಜ್ ತರಬೇತಿ – ಫಟಾಫಟ್‌ ನ್ಯೂಸ್‌

SHIVAMOGGA LIVE NEWS | 7 DECEMBER 2023 (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗದಲ್ಲಿ ರೈಲ್ವೆ ಹಿತರಕ್ಷಣಾ ಸಭೆ

FATAFAT-NEWS-GENERAL-IMAGE.jpg

FATAFAT-NEWS-1SHIMOGA : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಡಿ.8ರ ಸಂಜೆ 6ಕ್ಕೆ ನೈಋತ್ಯ ರೈಲ್ವೆ (Railway) ಬಳಕೆದಾರರ ಹಿತರಕ್ಷಣಾ ಸಭೆ ಏರ್ಪಡಿಸಲಾಗಿದೆ. ನೈಋತ್ಯ ರೈಲ್ವೆ ಸಲಹಾ ಸಮಿತಿ ಹುಬ್ಬಳ್ಳಿ ವಲಯದ ಸದಸ್ಯ ಕೆ.ವಿ ವಸಂತ್ ಕುಮಾರ್, ಜಿಲ್ಲಾ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಸ್.ಎಸ್.ಉದಯಕುಮಾರ್ ಹಾಗೂ ನಾಗರಾಜ್ ಗೊರೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರೈಲ್ವೆ ಬಳಕೆದಾರರು ಮತ್ತು ಸಾರ್ವಜನಿಕರು ರೈಲ್ವೆಗೆ ಸಂಬಂಧಿಸಿದ ಕುಂದುಕೊರತೆಗಳು, ರೈಲ್ವೆ (Railway) ಅಭಿವೃದ್ಧಿ ವಿಚಾರದಲ್ಲಿ ಅಹವಾಲು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ- ವಿಜಯೇಂದ್ರ ‘ಪುಢಾರಿʼ ಹೇಳಿಕೆಗೆ ಶಿಕಾರಿಪುರದಲ್ಲಿ ಆಕ್ರೋಶ, ಕ್ಷಮೆಗೆ ಪಟ್ಟು

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಎರಡು ತಿಂಗಳು ಮಸಾಜ್ ತರಬೇತಿ

FATAFAT-NEWS-2SHIMOGA : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯಿಂದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕ, ಯುವತಿಯರಿಗೆ ಮಸಾಜ್ ಬಗ್ಗೆ ಎರಡು ತಿಂಗಳ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ದೂ.08182-223230 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment