ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಸಾಗರದ ಜಂಬಗಾರು ರೈಲು ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಅವರ ಹೆಸರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಬಂಧನಕ್ಕೆ ಒಳಗಾಗಿದ್ದರು
ರಾಮಮನೋಹರ ಲೋಹಿಯಾ ಅವರು 1951ರ ಜೂನ್ 13ರಂದು ಜಂಬಗಾರು ರೈಲು ನಿಲ್ದಾಣದಲ್ಲಿ ‘ಉಳುವವನೇ ಹೊಲದೊಡೆಯ’ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು. ಈ ಹೋರಾಟಕ್ಕೆ 2024ರ ಜೂ.13ಕ್ಕೆ 75 ವರ್ಷವಾಗಲಿದೆ. ಅಮೃತವರ್ಷದ ಸಂದರ್ಭ ಈ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಅವರ ಹೆಸರು ಇಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಮಂಜುನಾಥ ಗೌಡ ಮರು ಪ್ರವೇಶ, ಕುತೂಹಲ ಮೂಡಿಸಿದ ನೇಮಕ
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವ್ಯವಸ್ಥಾಪಕ ಕಲ್ಲೂರು ಮೇಘರಾಜ್, ಪ್ರಮುಖರಾದ ಪ್ರೊ.ಕಲ್ಹನಾ, ಎಚ್.ಎಂ.ಸಂಗಯ್ಯ, ಎಸ್.ವಿ. ರಾಜಮ್ಮ, ಕೆ.ಆರ್.ಶಿವಣ್ಣ, ಶಂಕ್ರಾ ನಾಯ್ಕ, ನರಸಿಂಹಮೂರ್ತಿ, ಬಿ.ಟಿ. ಸೋಮಶೇಖರಯ್ಯ, ಪುಷ್ಪಲತಾ ಇದ್ದರು.