SHIVAMOGGA LIVE NEWS | 2 DECEMBER 2022
ಶಿವಮೊಗ್ಗ : ಕಾಶಿಪುರ ರೈಲ್ವೆ ಅಂಡರ್ ಪಾಸ್ (railway underpass) ಕಾಮಗಾರಿಯ ಬಾಕ್ಸ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಹಾಗಾಗಿ ಕಾಮಗಾರಿ ಬೇಗ ಮುಗಿಯುವ ನಿರೀಕ್ಷೆ ಮೂಡಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಬಾಕ್ಸ್ ಅಳವಡಿಸಲಾಗಿದ್ದು, ಬಾಕಿ ಉಳಿದಿರುವ ಕೆಲಸ ನಡೆಯುತ್ತಿದೆ. ಹಾಗಾಗಿ ಶೀಘ್ರದಲ್ಲೆ ವಾಹನ ಸಂಚಾರಕ್ಕೆ ಅನುವಾಗುವ ಸಾದ್ಯತೆ ಇದೆ. ಕೆಲವು ದಿನದ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಬಾಕ್ಸ್ ಅಳವಡಿಕೆ ಮಾಡುವಂತೆ ತಿಳಿಸಿದ್ದರು. ಸಂಸದ ರಾಘವೇಂದ್ರ ಭೇಟಿ ನೀಡಿ 10 ದಿನದಲ್ಲಿ ಬಾಕ್ಸ್ ಅಳವಡಿಸಲಾಗಿದೆ.
ALSO READ – ಶರಾವತಿ ಸಂತ್ರಸ್ಥರ ವಿಚಾರ, ಕಾಂಗ್ರೆಸ್‌ಗೆ 3 ಪ್ರಶ್ನೆ ಕೇಳಿದ ಸಂಸದ ರಾಘವೇಂದ್ರ
