ಶಿವಮೊಗ್ಗದಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 MAY 2023

SHIMOGA : ನಗರದಲ್ಲಿ ಗಾಳಿ, ಗುಡುಗು ಸಹಿತ ಜೋರು ಮಳೆ ಸುರಿಯುತ್ತಿದೆ. ಈಗ ಮಳೆ ಆರಂಭವಾಗಿದ್ದು, ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Admission Open for 2023-2024

ಸಂಜೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಕತ್ತಲಾಗುತ್ತಿದ್ದಂತೆ ಮಿಂಚು ಶುರುವಾಗಿತ್ತು. ಈಗ ಮಳೆ ಸುರಿಯಲು ಆರಂಭವಾಗಿದೆ. ಮಳೆ ಬರುವುದೋ ಇಲ್ಲವೋ ಎಂಬ ಅನುಮಾನದಲ್ಲಿ ಮನೆಯಿಂದ ಹೊರ ಬಂದವರು, ಈಗ ಕಟ್ಟಡಗಳ ಕೆಳಗೆ, ಮಳೆ ಬೀಳದಿರುವ ಕಡೆಯಲ್ಲಿ ಆಶ್ರಯ ಪಡೆಯುವಂತಾಗಿದೆ.

ಇದನ್ನೂ ಓದಿ – ಪ್ರಯಾಣಿಕರೆ ಗಮನಿಸಿ, ಎರಡು ದಿನ ಕೆಎಸ್‌ಆರ್‌ಟಿಸಿ ಬಸ್‌ ಸಿಗಲ್ಲ, ಕಾರಣವೇನು?

ಕಳೆದ ಕೆಲವು ದಿನದಿಂದ ಶಿವಮೊಗ್ಗದಲ್ಲಿ ಬಿಸಿಲಿನ ಬೇಗೆ ಮತ್ತು ಧಗೆ ಹೆಚ್ಚಾಗಿತ್ತು. 39 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ತಲುಪಿತ್ತು. ಈಗ ತಪಾಮಾನ ಕಡಿಮೆಯಾಗಿದೆ. ಆದರೆ ಶಕೆ ಕಡಿಮೆಯಾಗಿರಲಿಲ್ಲ. ಮಳೆ ಮತ್ತಷ್ಟು ಜೋರಾದರೆ ಧಗೆ ಕಡಿಮೆಯಾಗಬಹುದು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment