ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ಶಿವಮೊಗ್ಗದ ಜನರಿಗೆ ಇವತ್ತು ಸುರಿದ ಮಳೆ (Rain) ತುಸು ನೆಮ್ಮದಿ ನೀಡಿದೆ. ಮಧ್ಯಾಹ್ನ ಮಳೆಯಾಗುತ್ತಿದ್ದಂತೆ ತಾಪಮಾನ ಇಳಿಕೆಯಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ನಗರದಲ್ಲಿ ಇವತ್ತು ಬೆಳಗ್ಗೆಯಿಂದಲು ಬಿಸಿಲು, ಮೋಡದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಜೋರು ಮಳೆಯಾಯಿತು. ಮಳೆ ಇಲ್ಲದೆ ಛತ್ರಿಗಳನ್ನು ಮೂಲೆಗಿಟ್ಟಿದ್ದವರು ಪುನಃ ಅವುಗಳಿಗೆ ಕೆಲಸ ಕೊಡುವಂತಾಯಿತು. ಮಳೆಯ ನಿರೀಕ್ಷೆ ಇಲ್ಲದೆ ಕೆಲಸ, ಕಾರ್ಯಗಳಿಗೆ ಹೊರಗೆ ಬಂದವರು, ಮಳೆಯಿಂದ ನೆನೆಯುವುದನ್ನು ತಪ್ಪಿಸಿಕೊಳ್ಳಲು ಕಟ್ಟಡಗಳ ಅಡಿ ಆಶ್ರಯ ಪಡೆದರು.
ತಾಪಮಾನ ತುಸು ಇಳಿಕೆ
ಮಳೆಯಾಗದೆ (Rain) ನಗರದಲ್ಲಿ ತಪಾಮನ ತೀವ್ರ ಏರಿಕೆಯಾಗಿತ್ತು. ಕಳೆದೊಂದು ವಾರದಲ್ಲಿ 32 ಡಿಗ್ರಿವರೆಗೂ ಉಷ್ಣಾಂಶ ಹೆಚ್ಚಳವಾಗಿತ್ತು. ಕಳೆದ ಎರಡ್ಮೂರು ದಿನದಿಂದ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ಮಳೆ ಸುರಿಯುತ್ತಿರುವುದರಿಂದ ತಾಪಮಾನ ತುಸು ಇಳಿಕೆಯಾಗಿದೆ. ಇವತ್ತು ಮಧ್ಯಾಹ್ನ ಮಳೆಯಾಗುತ್ತಿದ್ದಂತೆ ಉಷ್ಣಾಂಶ ಮತ್ತಷ್ಟು ಇಳಿಕೆಯಾಗಿದೆ.
ಇದನ್ನೂ ಓದಿ – ಮಳೆಗಾಗಿ ಹಣಗೆರೆಯಲ್ಲಿ ಪೂಜೆ | ನಾರಾಯಣಗುರು ವಿಚಾರ ವೇದಿಕೆ ಮಹಿಳಾ ಘಟಕ ಅಸ್ತಿತ್ವಕ್ಕೆ – 3 ಫಟಾಫಟ್ ನ್ಯೂಸ್
ನಗರದಲ್ಲಿ ಈಗ 25 ರಿಂದ 27 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಇದೆ. ತೀವ್ರ ಶಕೆಯಿಂದ ಬಳಲಿದ್ದ ಜನರಿಗೆ ಕಳೆದ ಎರಡ್ಮೂರು ದಿನದಿಂದ ಮಳೆಯಾಗುತ್ತಿರುವುದು ನೆಮ್ಮದಿ ಮೂಡಿಸಿದೆ.