ಶಿವಮೊಗ್ಗ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಇಂದು ಸಂಜೆ ವೇಳೆಗೆ ಭಾರಿ ಗಾಳಿ, ಗುಡುಗು ಸಹಿತ ಜೋರು ಮಳೆ (Heavy Rainfall) ಆರಂಭವಾಗಿದೆ.
ಶಿವಮೊಗ್ಗ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ದಟ್ಟ ಮೋಡ (Dense Clouds) ಆವರಿಸಿದ್ದು, ಭಾರಿ ಮಳೆ ಸುರಿಯುತ್ತಿದೆ. ಮಳೆಯ ಜೊತೆಗೆ ಬಿರುಗಾಳಿಯ (Strong Wind) ರಭಸ ಹೆಚ್ಚಾಗಿದ್ದರಿಂದ ನಗರದ ಹಲವೆಡೆ ರಸ್ತೆ ಬದಿಯ ಮರದ ರೆಂಬೆಗಳು ಮುರಿದು ಬಿದ್ದಿರುವುದು ವರದಿಯಾಗಿದೆ. ಮಳೆಯಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ರಸ್ತೆ ಮಧ್ಯೆ ಸಂಕಷ್ಟ ಎದುರಿಸುವಂತಾಯಿತು.

ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯ ಪ್ರಮುಖ ತಾಲ್ಲೂಕುಗಳಾದ ಭದ್ರಾವತಿ (Bhadravathi), ಹೊಸನಗರ (Hosanagara) ಹಾಗೂ ಸೊರಬ (Soraba) ತಾಲ್ಲೂಕಿನ ವಿವಿಧ ಭಾಗಗಳಲ್ಲೂ ಉತ್ತಮ ಮಳೆಯಾಗುತ್ತಿರುವ (Precipitation) ವರದಿಗಳು ಬಂದಿವೆ. ಕೆಳಗಿದೆ ವಿಡಿಯೋ

