ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 APRIL 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA / BHADRAVATHI : ಬಾರಿ ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಮಳೆಯಾಗುತ್ತಿದೆ (Rain). ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗ ರಿಪೋರ್ಟ್ : ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಗಾಳಿ, ಗುಡುಗು ಸಹಿತ ಜೋರಾಗಿ ಮಳೆಯ (Rain) ಸುರಿಯಲು ಆರಂಭವಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.
ಭದ್ರಾವತಿ ರಿಪೋರ್ಟ್ : ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಾಗುತ್ತಿದ್ದಂತೆ ಖುಷಿಯಾದರು. ದಿಢೀರ್ ಮಳೆಯಿಂದಾಗಿ ಜನರು ಅಂಗಡಿಗಳು, ಕಟ್ಟಡಗಳ ಮುಂದೆ ನಿಲ್ಲಬೇಕಾಯಿತು.
ಭಾರಿ ಬಿಸಿಲಿಗೆ ಕಂಗೆಟ್ಟಿದ್ದರು
ಕಳೆದ ಕೆಲವು ದಿನದಿಂದ ಭಾರಿ ಬಸಿಲಿಗೆ ಶಿವಮೊಗ್ಗ ಜಿಲ್ಲೆ ಕಾದ ಕಾವಲಿಯಂತಾಗಿತ್ತು. ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ತೀವ್ರ ಶಕೆ, ಧಗೆಯಿಂದಾಗಿ ಜನರು ಹೈರಾಣಾಗಿದ್ದರು. ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಿ ಆಸ್ಪತ್ರೆಗೆ ಅಲೆಯುವಂತಾಗಿತ್ತು. ಅಲ್ಲದೆ, ಶಕೆ, ದಾಹ ನೀಗಿಸಿಕೊಳ್ಳಲು ತಂಪು ಪಾನಿಯ, ಎಳನೀರು, ಏರ್ ಕೂಲರ್, ಫ್ಯಾನುಗಳ ಮೊರೆ ಹೋಗಿದ್ದರು. ಈಗ ಮಳೆ ಆಗಿರುವುದರಿಂದ ಶಿವಮೊಗ್ಗ, ಭದ್ರಾವತಿಯಲ್ಲಿ ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ – ಕಾದ ಕಾವಲಿಯಂತಾಗಿದೆ ಮಲೆನಾಡು, ಶಿವಮೊಗ್ಗದಲ್ಲಿ ಎಷ್ಟಿದೆ ತಾಪಮಾನ?