ಶಿವಮೊಗ್ಗ ದಸರಾ, ಅಂಬು ಛೇದನಕ್ಕು ಮುನ್ನ ಮಳೆ ಅಬ್ಬರ, ಜನ ತತ್ತರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DASARA NEWS, 12 OCTOBER 2024 : ಜೋರು ಮಳೆಯ (Rain) ನಡುವೆ ಶಿವಮೊಗ್ಗ ದಸರಾದಲ್ಲಿ ಅಂಬು ಛೇದನ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್‌ ಗಿರೀಶ್‌ ಅವರು ಅಂಬು ಛೇದನ ಮಾಡಿದರು. ಬಳಿಕ ಪಟಾಕಿ ಸಿಡಿಸಲಾಯಿತು.

ಅಂಬು ಛೇದನಬದ ಬಳಿ ಜನರು ಘೋಷಣೆ ಕೂಗಿದರು. ಪರಸ್ಪರ ಬನ್ನಿ ಹಂಚಿಕೊಂಡು ದಸರಾ ಹಬ್ಬ ಶುಭಾಶಯ ವಿನಿಮಯ ಮಾಡಿಕೊಂಡರು. ಇದೇ ವೇಳೆ ಬೃಹತ್‌ ರಾವಣನ ಪ್ರತಿಕೃತಿ ದಹಿಸಲಾಯಿತು.

Banni-mantapa-in-Shimoga-dasara.

ಬನ್ನಿ ಮಂಟಪದಲ್ಲಿ ಮಳೆಯಿಂದ ಗೊಂದಲ

ಶಿವಮೊಗ್ಗ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ದಿಢೀರ್‌ ಶುರುವಾದ ಮಳೆಯಿಂದಾಗಿ ಜನರು ಕಾರ್ಯಕ್ರಮ ಬಿಟ್ಟು ತೆರಳುವಂತಾಯಿತು. ಕೆಲವರು ಛತ್ರಿ ಹಿಡಿದು ನಿಂತು ಅಂಬು ಛೇದನ ವೀಕ್ಷಿಸಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಂಬು ಛೇದನ ಆಯೋಜಿಸಲಾಗಿತ್ತು. ಈ ಸಂದರ್ಭ ಮಳೆಯಿಂದಾಗಿ ಜನರು ಗಲಿಬಿಲಿಗೊಂಡರು.

121024%20banni%20mantapa%20in%20Shimoga%20during%20rain

ಮೆರವಣಿಗೆ ವೇಳೆ ತುಂತುರು ಮಳೆ

ದಸರಾ ಮೆರವಣಿಗೆ ಜೈಲು ರಸ್ತೆಯಲ್ಲಿದ್ದಾಗ ದಟ್ಟವಾಗಿ ಮೋಡ ಕವಿದು, ತುಂತುರು ಮಳೆಯಾಗಿತ್ತು. ಕೆಲವೇ ನಿಮಿಷದಲ್ಲಿ ಮೋಡ ಸರಿದಂತಾಗಿತ್ತು. ಮಳೆ ಭೀತಿಯಿಂದಾಗಿ ಈ ಬಾರಿ ಅಂಬು ಛೇದನಕ್ಕೆ ಕಡಿಮೆ ಸಂಖ್ಯೆ ಜನ ಸೇರಿದ್ದರು.

bani

ದಿಢೀರ್‌ ಮಳೆಗೆ ಜನರು ಗಲಿಬಿಲಿ

ಅಂಬು ಛೇದನ ಕಾರ್ಯಕ್ರಮ ಮುನ್ನ ದಿಢೀರ್‌ ಮಳೆ ಸುರಿಯಿತು. ಜೋರು ಮಳೆಯಾಗುತ್ತಿದ್ದಂತೆ ತಕ್ಷಣ ಫ್ರೀಡಂ ಪಾರ್ಕ್‌ನಿಂದ ಹೊರ ನಡೆದರು. ಮಳೆಯಿಂದ ರಕ್ಷಣೆಗೆ ದಸರಾ ಕಾರ್ಯಕ್ರಮದ ಪೆಂಡಾಲ್‌, ಅಕ್ಕಪಕ್ಕದ ಕಟ್ಟಡಗಳ ಅಡಿ‌, ಉತ್ಸವ ಮೂರ್ತಿಗಳ ಟ್ರಾಕ್ಟರ್‌ ಕೆಳಗೆ ಕುಳಿತು ಜನರು ರಕ್ಷಣೆ ಪಡೆದರು. ಕೆಲವು ಛತ್ರಿ ಹಿಡಿದು ನಿಂತು ಕಾರ್ಯಕ್ರಮ ವೀಕ್ಷಿಸಿದರು.

ಇದನ್ನೂ ಓದಿ » ಶಿವಮೊಗ್ಗ ದಸರಾ ಮೆರವಣಿಗೆ, ಮೆರಗು ಹೆಚ್ಚಿಸಿದ ಕಲಾ ತಂಡಗಳು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 12, 2024

BREAKING NEWS – ಶಿವಮೊಗ್ಗದ ಸಿಂಹಧಾಮದಲ್ಲಿ ನೀರಾನೆ ದಾಳಿ ಡಾಕ್ಟರ್‌ ಸಾವು

BREAKING NEWS – ಶಿವಮೊಗ್ಗದ ಸಿಂಹಧಾಮದಲ್ಲಿ ನೀರಾನೆ ದಾಳಿ ಡಾಕ್ಟರ್‌ ಸಾವು

ಡಿ.ಬಿ.ಹಳ್ಳಿ ಕ್ರಾಸ್‌ನಲ್ಲಿ ಅಪಘಾತ, ಮಹಿಳೆಯ ಕೈ ಮೂಳೆ ಕಟ್‌, ಆಗಿದ್ದೇನು?

ಡಿ.ಬಿ.ಹಳ್ಳಿ ಕ್ರಾಸ್‌ನಲ್ಲಿ ಅಪಘಾತ, ಮಹಿಳೆಯ ಕೈ ಮೂಳೆ ಕಟ್‌, ಆಗಿದ್ದೇನು?

ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್‌ ಬಾಟಲಿಯಿಂದ ಅಟ್ಯಾಕ್‌, ಕಾರಣವೇನು?

ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್‌ ಬಾಟಲಿಯಿಂದ ಅಟ್ಯಾಕ್‌, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

Leave a Comment