ರಿಪ್ಪನ್‌ಪೇಟೆಯಲ್ಲಿ ಸಾಧಾರಣ ಮಳೆ, ಶಿವಮೊಗ್ಗದಲ್ಲಿ ಕವಿದ ಮೋಡ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 22 MARCH 2024

SHIMOGA : ರಣ ಬಿಸಿಲಿನಿಂದ ಜನ ಹೈರಾಣಾಗಿದ್ದಾರೆ. ಈ ಮಧ್ಯೆ ರಿಪ್ಪನ್‌ಪೇಟೆಯಲ್ಲಿ ಮಳೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದೆ.

ರಿಪ್ಪನ್‌ಪೇಟೆಯಲ್ಲಿ ಮಳೆ, ಮಣ್ಣಿನ ಘಮ

ಗುರುವಾರ ಸಂಜೆ ರಿಪ್ಪನ್‌ಪೇಟೆ ಸುತ್ತಮುತ್ತ ಮಳೆಯಾಗಿದೆ. ರಿಪ್ಪನ್‌ಪೇಟೆ, ಹೆದ್ದಾರಿಪುರ, ಅಮೃತ, ಹುಂಚ, ಬೆಳ್ಳೂರು, ಅರಸಾಳು, ಜೇನಿ ಹಾಗೂ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಮಣ್ಣಿನ ಘಮ ಹರಡಿ ಜನರು ನಿಟ್ಟುಸಿರು ಬಿಟ್ಟರು. ಮಳೆಯಿಂದಾಗಿ ಸ್ವಲ್ಪ ತಂಪು ಆವರಿಸಿತ್ತು.

ಶಿವಮೊಗ್ಗದಲ್ಲಿ ಕವಿದ ಮೋಡ

ಇತ್ತ ಶಿವಮೊಗ್ಗ ನಗರದಾದ್ಯಂತ ಶುಕ್ರವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದೆ. ಬಿಸಿಲು, ಧಗೆಯಿಂದ ಹೈರಾಣಾಗಿದ್ದ ಜನಕ್ಕೆ ಮೋಡ ಕವಿದ ವಾತಾವರಣ, ತಂಪು ಗಾಳಿ ಮುದ ನೀಡಿದೆ.

ಇದನ್ನೂ ಓದಿ – ಶಿವಮೊಗ್ಗದ ವ್ಯಾಪಾರಿಗೆ ಶಾಕ್‌ ನೀಡಿತು ಟೆಲಿಗ್ರಾಂನ ಅಲೀನಾ ಮೆಸೇಜ್‌, ಆಗಿದ್ದೇನು? ಕಳೆದುಕೊಂಡ ಹಣವೆಷ್ಟು? 

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment