ಶಿವಮೊಗ್ಗದ ವಿವಿಧೆಡೆ ಮಳೆ, ಬಿಸಿಲ ಧಗೆಯಿಂದ ಹೈರಾಣಾಗಿದ್ದ ನಗರಕ್ಕೆ ತುಸು ನೆಮ್ಮದಿ ನೀಡಿದ ವರುಣ

ಶಿವಮೊಗ್ಗ
LIVE

SHIVAMOGGA LIVE NEWS | 2 SEPTEMBER 2023

SHIMOGA : ನಗರದ ವಿವಿಧೆಡೆ ಮಧ್ಯಾಹ್ನದ ವೇಳೆಗೆ ಮಳೆ (Rainfall) ಆರಂಭವಾಗಿದೆ. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಮಳೆ ತುಸು ನಮ್ಮೆದಿ ನೀಡಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದನ್ನೂ ಓದಿ – ಭದ್ರಾ ಡ್ಯಾಂನಿಂದ 100 ದಿನ ನೀರು, ಅಚ್ಚುಕಟ್ಟು ರೈತರಿಂದ ಅಹೋರಾತ್ರಿ ಧರಣಿ, ರೈತರ ಆಗ್ರಹವೇನು?

ಮಳೆ ಇಲ್ಲದೆ ನೆತ್ತಿ ಸುಡುವ ಬಿಸಿಲಿನಿಂದಾಗಿ ಜನರು ಹೈರಾಣಾಗಿದ್ದರು. ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ನಗರದ (Shivamogga City) ಹಲವು ಕಡೆ ಮಳೆಯಾಗಿದೆ. ಕೆಲವು ಕಡೆ ಚದುರಿದಂತೆ ಮಳೆಯಾಗಿದೆ.

ಇನ್ನಷ್ಟು ಮಳೆಯಾದರೆ ನಗರದಲ್ಲಿ ವಾತಾವರಣ ತಂಪಾಗಲಿದೆ. ಇವತ್ತು ಬೆಳಗ್ಗೆಯಿಂದಲು ಮೋಡ (Cloudy) ಕವಿದ ವಾತಾವರಣವಿತ್ತು. ಆದರೂ 30 ಡಿಗ್ರಿ ಸೆಲ್ಷಿಯಸ್‌ನಷ್ಟು ತಾಪಮಾನ ಇದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment