NEWS HIGHLIGHTS
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಇಂದು ಸಂಜೆ ವೇಳೆಗೆ ಮಳೆಯಾಗಿದೆ (Rainfall). ಶಿವಮೊಗ್ಗ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಹಲವೆಡೆ ವಾತಾವರಣ ತುಸು ತಂಪಾಗಿದೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಶಿವಮೊಗ್ಗ ಜಿಲ್ಲೆಯ ಹಲವೆಡೆ ಸಂಜೆ ವೇಳೆಗೆ ಜೋರು ಮಳೆಯಾಗಿದೆ. ತೀರ್ಥಹಳ್ಳಿ, ಹೊಸನಗರ, ಸಾಗರದ ವಿವಿಧೆಡೆ ವರ್ಷಧಾರೆಯಾಗಿದ್ದು, ಜನಜೀವನಕ್ಕೆ ತಂಪೆರೆದಿದೆ. ವಿಶೇಷವಾಗಿ ತೀರ್ಥಹಳ್ಳಿಯಲ್ಲಿ ಭಾರಿ ಮಳೆಯಾದ (Heavy rain) ವರದಿಯಾಗಿದೆ.

ಶಿವಮೊಗ್ಗ ನಗರದಲ್ಲಿಯೂ ಸಂಜೆ ಮಳೆಯಾಯಿತು. ದಟ್ಟ ಮೋಡ ಆವರಿಸಿದ್ದರಿಂದ (Overcast sky) ಜೋರು ಮಳೆಯ ನಿರೀಕ್ಷೆ ಇತ್ತು, ಆದರೆ ಸಾಧಾರಣ ಮಳೆಯಾಗಿದೆ. ಗಾಳಿ ಮತ್ತು ಮಳೆಯ ಕಾರಣ ಹೊರಗಿನ ವಾತಾವರಣ ತಂಪಾಗಿದ್ದರೂ, ಕಟ್ಟಡಗಳು ಹಾಗೂ ಮನೆಗಳ ಒಳಗೆ ಸೆಕೆ ಅಥವಾ ಧಗೆ (Humidity) ಮುಂದುವರಿದಿದೆ.
ಇದನ್ನೂ ಓದಿ:➤ ಸಿಎಂ ಜೊತೆಗೆ ಶಿವಮೊಗ್ಗ ಡಿಸಿ ವಿಡಿಯೋ ಕಾನ್ಫರೆನ್ಸ್, ಬಳಿಕ ದಿಢೀರ್ ಮೀಟಿಂಗ್, ಏನಂದ್ರು ಜಿಲ್ಲಾಧಿಕಾರಿ?