SHIVAMOGGA LIVE NEWS
SHIMOGA | ಮಹಾನಗರ ಪಾಲಿಕೆಯ ದಸರಾ 2022 ಅಂಗವಾಗಿ ಸೆ.27ರಿಂದ ಶಿವಮೊಗ್ಗದಲ್ಲಿ ರಂಗ ದಸರಾ (RANGA DASARA) ಆಯೋಜಿಸಲಾಗಿದೆ ಎಂದು ರಂಗ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಂಗದಸರಾದಲ್ಲಿ (RANGA DASARA) ರಂಗಕಲೆಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಸಮಾಗಮ, ಮೂಕಾಭಿನಯ ಸ್ಪರ್ಧೆ, ರಂಗ ತುಣಕು, ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿದ್ದು, ಅವರಿಂದಲೇ 5 ಮಕ್ಕಳ ನಾಟಕ ಮಾಡಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಇದಕ್ಕೆ ಸಹಕಾರ ನೀಡಿದೆ. 5 ಹೊಸ ನಾಟಕಗಳು ಹೊಸ ನಿರ್ದೇಶಕರಿಂದ ಮೂಡಿ ಬರುತ್ತಿದೆ. ಒಂದು ತಂಡದಲ್ಲಿ 30 -35 ಮಕ್ಕಳು ಭಾಗವಹಿಸಲಿದ್ದಾರೆ ಎಂದು ಚನ್ನಬಸಪ್ಪ ತಿಳಿಸಿದರು.
ಮಧ್ಯಾಹ್ನ 12.30 ಕ್ಕೆ ಜಿಲ್ಲಾ ಮಟ್ಟದ ರಂಗ ಸಮಾಗಮ, ರಂಗ ಕಲಾವಿದರ ಗೋಷ್ಠಿ, ಮಧ್ಯಾಹ್ನ 2.30 ಕ್ಕೆ ಜಿಲ್ಲಾಮಟ್ಟದ ಮೂಕಾಭಿನಯ ಸ್ಪರ್ಧೆಗೆ ರಂಗ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಚಾಲನೆ ನೀಡಲಿದ್ದಾರೆ. ಸಂಜೆ 6.30 ಕ್ಕೆ ರಂಗ ತುಣುಕು ಕಾರ್ಯಕ್ರಮಕ್ಕೆ ರಂಗಕರ್ಮಿ ರೇಣುಕಪ್ಪ ಚಾಲನೆ ನೀಡಲಿದ್ದಾರೆ ಎಂದರು.
ಸೆ. 28 ರಂದು ಬುಧವಾರ ಬೆಳಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ (ಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ) ನಡೆಯಲಿದೆ. ರಂಗಕರ್ಮಿ ಹರಿಗೆ ಗೋಪಾಲಸ್ವಾಮಿ ಅವರು ಚಾಲನೆ ನೀಡಲಿದ್ದಾರೆ.
ಅಂದು ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ನಡೆಯಲಿದೆ. ಪರಿಸರ ಪ್ರೇಮಿ ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಿ.ಎಂ.ರಾಜಕುಮಾರ್ ಹಾಗೂ ಗಾಯತ್ರಿ ಅವರು ಚಾಲನೆ ನೀಡಲಿದ್ದಾರೆ.
ಸೆ. 29 ರಂದು ಸಂಜೆ 5 ಗಂಟೆಗೆ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ. ಸೆ. 30 ರಂದು ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ನಡೆಯಲಿದೆ.
ಅಂದು ಸಂಜೆ 5 ರಿಂದ ಕುವೆಂಪು ರಂಗಮಂದಿರದಲ್ಲಿ ರಂಗದಸರಾ (RANGA DASARA) ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಹೆಚ್.ಎಸ್.ನಾಗಭೂಷಣ್, ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಅವರು ಭಾಗವಹಿಸಲಿದ್ದಾರೆ ಎಂದರು.
5 ರಂಗಗೀತೆ ಗಾಯನ ತಂಡಗಳಿಂದ ಪ್ರತಿದಿನ ಸಂಜೆ 6.30 ರಿಂದ 7.30 ರವರೆಗೆ ರಂಗಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. 27 ರಂದು ಮಧುರಾ ಕಲಾತಂಡದಿಂದ ಗೋಪಾಲಗೌಡ ಬಡಾವಣೆ ಇ ಬ್ಲಾಕ್ ನಲ್ಲಿರುವ ನಿಸರ್ಗ ಪಾರ್ಕ್’ನಲ್ಲ ಕಾರ್ಯಕ್ರಮ ನಡೆಯಲಿದೆ.
ಸೆ. 28 ರಂದು ರಂಗಬೆಳಕು ತಂಡದಿಂದ ವಿನೋಬನಗರ ಪಿ ಅಂಡ್ ಟಿ ಕಾಲೋನಿಯಲ್ಲಿ, ಸೆ. 29 ರಂದು ಸಹ್ಯಾದ್ರಿ ಕಲಾತಂಡದಿಂದ ಇಸ್ಲಾಪುರ ನಾಗಚೌಡೇಶ್ವರಿ ದೇವಾಲಯದಲ್ಲಿ, ಸೆ. 30 ರಂದು ನಮ್ ಟೀಂ ವತಿಯಿಂದ ರಾಜೇಂದ್ರ ನಗರ ಪಾರ್ಕ್’ನಲ್ಲಿ, ಅ. 1 ರಂದು ಚೆಲುವರಂಗ ತಂಡದಿಂದ ಕೋಟೆ ಬಯಲು ರಮಗಮಂದಿರದಲ್ಲಿ ರಂಗಗೀತೆ ಗಾಯನ ನಡೆಯಲಿದೆ ಎಂದರು.
ನಾಟಕದಲ್ಲಿ ವಿಜೇತರಿಗೆ, ಹಾಸ್ಯ ನಾಟಕ ಸ್ಪರ್ಧೆಯಲ್ಲಿ ವಿಜೇತರಿಗೆ ಚಾಮುಂಡೇಶ್ವರಿ ಟ್ರೋಫಿ ನೀಡಲು ತೀರ್ಮಾನಿಸಲಾಗಿದೆ. ಹಾಸ್ಯನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಿಗೆ ಒಂದು ತಿಂಗಳ ನಂತರ ಬಹುಮಾನ ನೀಡಲಾಗುತ್ತದೆ. ಅದೇ ದಿನ ಆ ನಾಟಕ ಪ್ರದರ್ಶಿಸಲಾಗುತ್ತದೆ. ಹಾಸ್ಯ ನಾಟಕದ ರಚನೆ ಪುಸ್ತಕ ರೂಪದಲ್ಲಿ ಒಂದು ಸಾವಿರ ಪ್ರತಿ ಮುದ್ರಿಸಿ ನೀಡಲು ರಂಗಾಯಣ ನಿರ್ದೇಶಕರು ಒಪ್ಪಿಗೆ ಸೂಚಿಸದ್ದಾರೆ. ಸಾವಿರಕ್ಕೂ ಹೆಚ್ಚು ಮಕ್ಕಳು ರಂಗದಸರಾದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗದಸರಾ ಸಮಿತಿ ಸದಸ್ಯರಾದ ಆರ್.ಸಿ. ನಾಯಕ್, ಪ್ರಭಾಕರ್, ಹೆಚ್. ಮೂರ್ತಿ, ಶಿರೀಶ್, ಅಭಿಯಂತರ ಮಧು ಸೇರಿದಂತೆ ಹಲವರು ಇದ್ದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಮತದಾರರ ಮನ ಸೆಳೆಯಲು ಈಗಿಂದಲೆ ಅಖಾಡಕ್ಕಿಳಿದ ಆಕಾಂಕ್ಷಿಗಳು, ಏನೇನು ಕಸರತ್ತು ಮಾಡ್ತಿದ್ದಾರೆ?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200