ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ (Ranji) ಪಂದ್ಯಾವಳಿಯ ಮೊದಲ ಸೆಷನ್ ಮುಕ್ತಾಯಗೊಂಡಿದೆ. ಮಧ್ಯಾಹ್ನದ ವೇಳೆಗೆ ಕರ್ನಾಟಕ ತಂಡ ಎರಡು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ. ಅರ್ಜುನ್ ತೆಂಡುಲ್ಕರ್ ಎರಡು ವಿಕೆಟ್ ಪಡೆದು ಗೋವಾ ತಂಡಕ್ಕೆ ಬಲ ತುಂಬಿದ್ದಾರೆ.
ಕರ್ನಾಟಕ ತಂಡದ ಕ್ಯಾಪ್ಟರ್ ಮಯಾಂಕ್ ಅಗರ್‌ವಾಲ್ ಮತ್ತು ನಿಕಿನ್ ಜೋಸ್ ಅರಂಭಿಕ ಜೋಡಿ ಬ್ಯಾಟಿಂಗ್ ಆರಂಭಿಸಿತು. ಅರ್ಜುನ್ ತೆಂಡುಲ್ಕರ್ ಬೌಲಿಂಗ್‌ನಲ್ಲಿ ಮಂಥನ್‌ಗೆ ಕ್ಯಾಚ್ ಕೊಟ್ಟು ನಿಕಿನ್ (3 ರನ್) ಜೋಸ್ ಅಂಗಣದಿಂದ ಹೊರ ನಡೆದರು. ಕೆ.ಎಲ್.ಶ್ರೀಜಿತ್ (0 ರನ್) ಕೂಡ ಅರ್ಜುನ್ ತೆಂಡುಲ್ಕರ್ ಬೌಲಿಂಗ್‌ನಲ್ಲಿ ಸಮರ್ ದುಬಾಷಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. 22 ನೇ ಓವರ್‌ನಲ್ಲಿ ಮಯಾಂಕ್ ಅಗರ್‌ವಾಲ್ (28 ರನ್) ಕೌಶಿಕ್ ಬೌಲಿಂಗ್‌ನಲ್ಲಿ ಸ್ನೇಹಲ್‌ಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
ಕ್ಯಾಪ್ಟನ್ ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್ ಜೊತೆಯಾಟ ಕರ್ನಾಟಕ ತಂಡಕ್ಕೆ ಹೆಚ್ಚು ರನ್ ತಂದುಕೊಡುವ ನಿರೀಕ್ಷೆ ಇತ್ತು. ಸದ್ಯ 25 ಓವರ್ ಮುಕ್ತಾಯವಾಗಿದೆ. ಕರ್ನಾಟಕ ತಂಡ 60 ರನ್ ಗಳಿಸಿದೆ.

ಗೋವಾ ತಂಡದ ಅರ್ಜುನ್ ತೆಂಡುಲ್ಕರ್ 9 ಓವರ್‌ಗೆ 21 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಕೌಶಿಕ್ 9 ಓವರ್‌ಗೆ 10 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ವಿಜೇಶ್ ಪ್ರಭುದೇಸಾಯಿ 8 ಓವರ್‌ಗೆ 20 ರನ್ ನೀಡಿದ್ದಾರೆ.


ಇದನ್ನೂ ಓದಿ » ಶಿವಮೊಗ್ಗದಲ್ಲಿ ರಣಜಿ ಪಂದ್ಯ, ಟಾಸ್ ವಿನ್ ಆದ ಗೋವಾ ತಂಡ
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು















