ರವೀಂದ್ರನಗರ ಗಣಪತಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ, ಏನೆಲ್ಲ ಕಾರ್ಯಕ್ರಮ ಇರಲಿದೆ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 05 ಅಕ್ಟೋಬರ್ 2021

ರವೀಂದ್ರನಗರ ಪ್ರಸನ್ನಗಣತಿ (ಬಲಮುರಿ) ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಶರನ್ನವರಾತ್ರೋತ್ಸವದ ಅಂಗವಾಗಿ ಪ್ರತಿದಿನ ಶ್ರೀ ಚಂಡಿಕಾಯಾಗ, ಶ್ರೀಲಲಿತಾ ಸಹಸ್ರನಾಮ ಸ್ತೋತ್ರ ಪಠಣ, ಭಜನಾ – ಭಜನೋತ್ಸವ ಹಾಗೂ 15 ದಿನ ನಿರಂತರ ‘ಶ್ರೀದೇವಿ ಭಾಗವತ ಪುರಾಣ ಪ್ರವಚನ’ ನಂತರ ನಿತ್ಯ ಸ್ಥಳೀಯ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ನವಾರಾತ್ರಿ ಅಂಗವಾಗಿ ಅ.7 ರಿಂದ 20 ರವರೆಗೆ ವೈಭವದ ದಸರಾ ಶರನ್ನವರಾತ್ರೋತ್ಸವ ಆಚರಣೆ ನಡೆಯಲಿದೆ. ಅ.20 ರಂದು ಲೋಕ ಕಲ್ಯಾಣಾರ್ಥವಾಗಿ ಪ್ರತಿವರ್ಷದಂತೆ ‘ಶತಚಂಡಿಕಾಯಾಗ’ ನಡೆಯಲಿದೆ.

ಜ್ಯೋತಿಷ್ಯ ಶಾಸ್ತ್ರ ಚತುರ್ಶಾಸ್ತ್ರ ಪಂಡಿತರಾದ ವಿದ್ವಾನ್ ಪಂಜಾ ಭಾಸ್ಕರ ಭಟ್ಟ ಉಡುಪಿ ಇವರಿಂದ 15 ದಿನಗಳ ನಿರಂತನ ‘ಶ್ರೀದೇವಿ ಭಾಗವತ ಪುರಾಣ ಪ್ರವಚನ’ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30ರಿಂದ ಪ್ರತಿದಿನ ನಗರದ ಪ್ರಸಿದ್ಧ ಯಕ್ಷಗಾನ ಭಾಗವತರು, ವಿದ್ವಾನ್ ಶ್ರೀ ಐನಬೈಲು ಪರಮೇಶ್ವರ ಹೆಗಡೆಯವರ ಮಾರ್ಗದರ್ಶನದಲ್ಲಿ ಸ್ಥಳೀಯ ಪ್ರಸಿದ್ಧ ಕಲಾವಿದರ ಸಹಕಾರದೊಂದಿಗೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

LifeSpring%2BKan%2B02

1632381449326627 1

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

Fata-Fata-News-General.jpg

Leave a Comment