SHIVAMOGGA LIVE NEWS | 23 FEBRURARY 2023
SHIMOGA : ರವೀಂದ್ರ ನಗರದ ಗಣಪತಿ ದೇವಸ್ಥಾನದ (Ganapathi Temple) ಪ್ರಧಾನ ಅರ್ಚಕ ಅ.ಪ.ರಾಮಭಟ್ಟ ಅವರು ನಿಧನರಾಗಿದ್ದಾರೆ. ಬಸವನಗುಡಿ 5ನೇ ಅಡ್ಡರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅ.ಪ.ರಾಮಭಟ್ಟ ಅವರು ವೇದ ಬ್ರಹ್ಮ ಎಂದು ಬಿರುದು ಪಡೆದಿದ್ದರು. ಭಜನಾ ಪರಿಷತ್ತಿನ ಅಧ್ಯಕ್ಷರಾಗಿದ್ದರು. ದೇವಸ್ಥಾನದ (Ganapathi Temple) ಪೂಜೆಯ ಜೊತೆಗೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯು ತೊಡಗಿಸಿಕೊಂಡಿದ್ದರು. ಭಜನಾ ಪರಿಷತ್ತಿನ ಜೊತೆಗೆ ಹಲವು ಸಂಘಟನೆಗಳಲ್ಲಿಯು ಗುರುತಿಸಿಕೊಂಡಿದ್ದರು.
ಇದನ್ನೂ ಓದಿ – ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಮತ್ತೆ ಪೌಡರ್ ಗ್ಯಾಂಗ್ ಪ್ರತ್ಯಕ್ಷ, ಮಹಿಳೆಗೆ ವಂಚನೆ
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅ.ಪ.ರಾಮಭಟ್ಟ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.