SHIVAMOGGA LIVE NEWS, 18 DECEMBER 2024
ಶಿವಮೊಗ್ಗ : ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ವತಿಯಿಂದ ನಡೆಸಲಾಗುತ್ತಿರುವ ಮುಷ್ಟಿ ಅಕ್ಕಿ (Rice) ಸಂಗ್ರಹ ಅಭಿಯಾನಕ್ಕೆ ಬೊಮ್ಮನಕಟ್ಟೆಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು.
ಪಾಪ ಕರ್ಮಗಳು ದೂರಾಗಬೇಕಿದ್ದರೆ ದಾನ ಮಾಡಬೇಕು. ಅನ್ನದಾನ ಅತ್ಯಂತ ಶ್ರೇಷ್ಠವಾದ್ದದ್ದು. ಇದು ಹಸಿವನ್ನು ನೀಗಿಸುವ ಶ್ರೇಷ್ಠ ಕಾರ್ಯ. ಮುಷ್ಟಿ ಅಕ್ಕಿ ಸಂಗ್ರಹ ಅಭಿಯಾನ ಯಶಸ್ವಿಯಾಗಲಿ.
ಶ್ರೀ ಸಾಯಿನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠ
ಕಳೆದ ನಾಲ್ಕು ವರ್ಷದಿಂದ ಅಭಿಯಾನ ನಡೆಯುತ್ತಿದೆ. ಎರಡು ಲಾರಿಯಷ್ಟು ಅಕ್ಕಿ ಮತ್ತು ಇತರೆ ಸಾಮಗ್ರಿ ಸಂಗ್ರಹವಾಗುತ್ತಿತ್ತು. ಎರಡೂ ಲಾರಿಯನ್ನು ಶಬರಿಮಲೈಗೆ ಕಳುಹಿಸುತ್ತಿದ್ದೆವು. ಈ ಬಾರಿ ಒಂದು ಲಾರಿಯಷ್ಟು ಸಾಮಗ್ರಿಯನ್ನು ಶಬರಿಮಲೈಗೆ, ಇನೊಂದು ಲಾರಿಯಷ್ಟು ಸಾಮಗ್ರಿಯನ್ನು ಶಿವಮೊಗ್ಗದ ಭಕ್ತರ ಅನುಕೂಲಕ್ಕೆ ಉಪಯೋಗಿಸಲಾಗುತ್ತದೆ.
ಕೆ.ಇ.ಕಾಂತೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಶಬರಿಮಲೈ ಸನ್ನಿಧಾನಕ್ಕೆ ತೆರಳುವ ಭಕ್ತರಿಗೆ ಅನ್ನದಾನ ಮಾಡುವ ಉದ್ದೇಶದಿಂದ ಶಿವಮೊಗ್ಗದ ಪ್ರತಿ ಮನೆಯಿಂದ ಒ೦ದು ಮುಷ್ಟಿ ಅಕ್ಕಿ ಸಂಗ್ರಹಿಸುವುದು ಅಭಿಯಾನದ ಉದ್ದೇಶ. ಇವತ್ತು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶ್ರೀ ಸಾಯಿನಾಥ ಸ್ವಾಮೀಜಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ವಿಶ್ವಾಸ್, ಮಂಜುನಾಥ್ ಸೇರಿದಂತೆ ಹಲವರು ಮನೆ ಮನೆಗಳಿಂದ ಮುಷ್ಟಿ ಅಕ್ಕಿ ಸಂಗ್ರಹಿಸಿದರು.
ಇದನ್ನೂ ಓದಿ » ಹೊಳಲೂರು ಬಳಿ ಕರಡಿ ಪ್ರತ್ಯಕ್ಷ, ವಿಡಿಯೋ ವೈರಲ್, ಜನರಲ್ಲಿ ಭೀತಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200