ಶಿವಮೊಗ್ಗದ ಅವೈಜ್ಞಾನಿಕ ಹಂಪ್‌ಗೆ ಮೊದಲ ಬಲಿ, ಸಿಸಿಟಿವಿಯಲ್ಲಿ ಭೀಕರತೆ ಸೆರೆ, ಇಲ್ಲಿದೆ ವಿಡಿಯೋ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಹೆದ್ದಾರಿಯಲ್ಲಿನ ಅವೈಜ್ಞಾನಿಕ ಹಂಪ್‌ಗೆ (road hump) ಶಿವಮೊಗ್ಗದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾರೆ. ಘಟನೆಯ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಗಿಗುಡ್ಡ ನಿವಾಸಿ ಸಯ್ಯದ್‌ ಸುಹೇಲ್‌ ಉಲ್ಲಾ (32) ಮೃತ ದುರ್ದೈವಿ. ಫೆಬ್ರವರಿ 12ರಂದು ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಯ್ಯದ್‌ ಸುಹೇಲ್‌ ಉಲ್ಲಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದಾರೆ.

ಆಗಿದ್ದೇನು?

ಸವಳಂಗ ರಸ್ತೆಯ ಸಂಗೀತಾ ಮೊಬೈಲ್‌ ಶೋ ರೂಂನಲ್ಲಿ ಸಯ್ಯದ್‌ ಸುಹೇಲ್‌ ಉಲ್ಲಾ ಕೆಲಸ ಮಾಡುತ್ತಿದ್ದರು. ಫೆಬ್ರವರಿ 12ರಂದು ರಾತ್ರಿ ಕೆಲಸ ಮುಗಿಸಿ ಟಿವಿಎಸ್ ಜುಪಿಟರ್ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ಸವಳಂಗ ರಸ್ತೆಯ ಫ್ಲೈ ಓವರ್ ದಾಟಿ ಎಲ್.ಬಿ.ಎಸ್. ನಗರದ ತಿರುವಿನಲ್ಲಿ  ಬರುತ್ತಿದ್ದಾಗ, ರಸ್ತೆಯಲ್ಲಿದ್ದ ಹಂಪ್ಸ್ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದಿದೆ ಎಂದು ಆರೋಪಿಸಲಾಗಿದೆ.

160226 Accident Due to unscientific humps in Shivamogga Savalanga Road 1

ಅಪಘಾತದಿಂದಾಗಿ ಸುಹೇಲ್ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಕೋಮಾಗೆ ಹೋಗಿದ್ದ ಯುವಕ ಫೆ.15ರಂದು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಮಣ್ಣು ಪರೀಕ್ಷೆ, ಇನ್ನೊಂದು ವಾರದಲ್ಲಿ ವರದಿ, ಪರೀಕ್ಷೆ ಯಾಕೆ?

ಸಿಸಿಟಿವಿಯಲ್ಲಿ ಭೀಕರತೆ ಸೆರೆ

ಸುಹೇಲ್‌ ಅಪಘಾತಕ್ಕೀಡಾದ ದೃಶ್ಯ ಇಲ್ಲಿನ ಮಳಿಗೆ ಒಂದರಲ್ಲಿ ಅಳವಡಿಸಿದ್ದ ಸಿಸಿಟಿವಿಟಿಯಲ್ಲಿ ಸೆರೆಯಾಗಿದೆ. ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದ ಹಂಪ್‌ ಹಾರಿ ಬಂದ ಸುಹೇಲ್‌, ನಿಯಂತ್ರಣ ತಪ್ಪಿ ಬೈಕ್‌ ಸಹಿತ ಬಿದ್ದಿದ್ದಾರೆ. ಸ್ವಲ್ಪ ದೂರದವರೆಗೆ ಬೈಕ್‌ ಮತ್ತು ಸುಹೇಲ್‌ ಉಜ್ಜಿಕೊಂಡು ಹೋಗಿದ್ದಾರೆ. ನಡುರಸ್ತೆಯಲ್ಲಿ ಪ್ರಜ್ಞೆಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸುಹೇಲ್‌ನನ್ನು ಸ್ಥಳೀಯರು ಕೂಡಲೆ ಆರೈಕೆ ಮಾಡಿದ್ದಾರೆ. ಅಲ್ಲದೆ ನಡುರಸ್ತೆಯಿಂದ ಪಕ್ಕಕ್ಕೆ ಎಳೆದು ತಂದಿದ್ದಾರೆ.  ಇಲ್ಲಿದೆ ವಿಡಿಯೋ 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment