ಶಿವಮೊಗ್ಗ ವಿಮಾನ ನಿಲ್ದಾಣದ ಮಣ್ಣು ಪರೀಕ್ಷೆ, ಇನ್ನೊಂದು ವಾರದಲ್ಲಿ ವರದಿ, ಪರೀಕ್ಷೆ ಯಾಕೆ?

ಶಿವಮೊಗ್ಗ: ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ನೈಟ್ ಲ್ಯಾಂಡಿಂಗ್ (night landing) ಸೌಲಭ್ಯ ಜಾರಿಗೆ ತರಲು ಮಣ್ಣಿನ ಪರೀಕ್ಷೆ (Soil Testing) ಕಾರ್ಯಕ್ಕೆ ನಡೆಸಲಾಗುತ್ತಿದೆ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಅವರು ತಿಳಿಸಿದರು.

ನಗರದ ಮಲ್ನಾಡ್‌ ಶೈರ್‌ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಯ್ಯಮಠ ಅವರು, ನೈಟ್ ಲ್ಯಾಂಡಿಂಗ್ ವ್ಯವಸ್ಥೆಗಾಗಿ ರನ್‌ವೇ ಬದಿಯಲ್ಲಿ ದೀಪಗಳನ್ನು ಅಳವಡಿಸುವ ಕಾರ್ಯ ಬಾಕಿಯಿದೆ. ಈ ಉಪಕರಣಗಳನ್ನು ಅಳವಡಿಸಲು ಭೂಮಿಯ ಮಣ್ಣಿನ ಸಾಮರ್ಥ್ಯ ಮತ್ತು ಸ್ಥಿತಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸುವುದು ಅತ್ಯಗತ್ಯ. ಈ ಪರೀಕ್ಷಾ ವರದಿಯು ಬಂದ ತಕ್ಷಣವೇ ಅಗತ್ಯ ತಾಂತ್ರಿಕ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Nanjaiah-Mutt-speaks-about-Shivamogga-Airport-at-Malnad-Shire-hotel

Nanjaiah-Mutt-speaks-about-Shivamogga-Airport-at-Malnad-Shire-hotel

ಇನ್ನು ಆರೇಳು ತಿಂಗಳಲ್ಲಿ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಡಿವಿಒಆರ್‌ ದಿಕ್ಸೂಚನೆ ಕೊಡುವ ಯಾಂತ್ರಿಕ ವ್ಯವಸ್ಥೆ. ಇನ್ನೊಂದು ವಾರದಲ್ಲಿ ಮಣ್ಣಿನ ಪರೀಕ್ಷೆಯ ವರದಿ ಬರುವ ನಿರೀಕ್ಷೆ ಇದೆ. ಆ ಬಳಿಕ ನೈಟ್‌ ಲ್ಯಾಂಡಿಂಗ್‌ ಕೆಲಸ ಪ್ರಾರಂಭವಾಗಲಿದೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ವಿಮಾನಗಳ ನೈಟ್‌ ಲ್ಯಾಂಡಿಂಗ್‌ ಆರಂಭವಾಗಲಿದೆ. ಲೈಂಟಿಂಗ್‌ಗೆ ವಿದ್ಯುತ್‌ ಸಂಪರ್ಕದ ಕಾಮಗಾರಿ ಪೂರ್ಣಗೊಂಡಿದೆ.ಎಸ್‌.ಜಿ.ನಂಜಯ್ಯನಮಠ, ಕೆಎಸ್‌ಐಐಡಿಸಿ ಅಧ್ಯಕ್ಷ

ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು

 ಲೈಸೆನ್ಸ್‌ ನವೀಕರಣ:  22 ಲಕ್ಷ ದಂಡ ಪಾವತಿಸದ ಹಿನ್ನೆಲೆ ಲೈಸೆನ್ಸ್‌ ನವೀಕರಣ ಆಗಿರಲಿಲ್ಲ. ಕಳೆದ ಭೇಟಿ ವೇಳೆ ದಂಡ ಪಾವತಿಸಿ, ಲೈಸೆನ್ಸ್‌ ನವೀಕರಣ ಆಗಿದೆ. ಇನ್ನು ಮೂರು ವರ್ಷ ಯಾವುದೇ ತೊಂದರೆ ಇಲ್ಲ.

Nanjaiah-Mutt-speaks-about-Shivamogga-Airport-at-Malnad-Shire-hotel

 ಉಡಾನ್‌ ಯೋಜನೆ:  ಉಡಾನ್‌ ಯೋಜನೆ ನವೆಂಬರ್‌ಗೆ ಪೂರ್ಣಗೊಳ್ಳಲಿದೆ. ಈ ಸಂಬಂಧ ಸಂಸದ ರಾಘವೇಂದ್ರ ಅವರನ್ನು ಸಂಪರ್ಕಿಸಿ ಯೋಜನೆ ವಿಸ್ತರಣೆ ಕುರಿತು ಚರ್ಚೆ ನಡೆಸುತ್ತೇನೆ.

 ಟರ್ಮಿನಲ್ ವಿಸ್ತರಣೆ:  ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವುದರಿಂದ ಟರ್ಮಿನಲ್ ಸಾಮರ್ಥ್ಯ ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಸಲಾಗಿದೆ.

 ಸರಕು ಸಾಗಣೆ ವಿಮಾನ: ಕಾರ್ಗೊ ವಿಮಾನಗಳು ಸಾಮಾನ್ಯವಾಗಿ ರಾತ್ರಿ ವೇಳೆ ಬರುತ್ತವೆ. ಆದ್ದರಿಂದ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆಯಾದರೆ ಸರಕು ಸಾಗಣೆ ವಿಮಾನಗಳು ಬಂದು ಹೋಗಲು ಅನುಕೂಲ ಆಗಲಿದೆ.

Nanjaiah-Mutt-speaks-about-Shivamogga-Airport-at-Malnad-Shire-hotel

  ಪೈಲೆಟ್‌ ಟ್ರೈನಿಂಗ್‌ ಸೆಂಟರ್:   ಇದರ ಸ್ಥಾಪನೆಗೆ ಟೆಂಡರ್‌ ಕರೆದಿದ್ದೆವು. ಅದರೆ ಯಾರು ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ ಪುನಃ ಅರ್ಜಿ ಕರೆಯಲಾಗುತ್ತದೆ.

ಇದನ್ನೂ ಓದಿ – ಶಿವಮೊಗ್ಗದ ಸವಾರರೆ ಹುಷಾರ್‌, ಬೈಕ್‌ನಿಂದ ಬಿದ್ದರು, ಆಟೋ ಜಖಂ, ಕಾರ್‌ ಕೆಳಗೆ ಡ್ಯಾಮೇಜ್‌, ಏನಿದು?

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕ ಶಮಂತ್‌, ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ವಿದ್ಯಾಧರ ಸಾಲಿಮಠ, ಕೆಎಸ್‌ಐಎಸ್‌ಎಫ್‌ ಡಿವೈಎಸ್‌ಪಿ ಚಂದ್ರಶೇಖರ್‌ ಸೇರಿದಂತೆ ಇದ್ದರು.

Leave a Comment