ಮಹಿಳೆಯ ಕೈ, ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ, ಮನೆಯಲ್ಲಿ ಹಣ, ಮೊಬೈಲ್ ದರೋಡೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 8 ಜುಲೈ 2022

ವೃದ್ಧೆಯೊಬ್ಬರ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿ ನಗದು, ಮಂಗಳ ಗೌರಿ ಮೂರ್ತಿ, ಮೊಬೈಲ್ ಫೋನ್ ರಾಬರಿ (ROBBERY) ಮಾಡಲಾಗಿದೆ.

Shimoga Nanjappa Hospital

ಶಿವಮೊಗ್ಗದ ವೆಂಕಟೇಶ ನಗರದಲ್ಲಿ ಘಟನೆ ಸಂಭವಿಸಿದೆ. ಪ್ರೇಮಾ (63) ಎಂಬುವವರ ಕೈ, ಕಾಲು ಕಟ್ಟಿ ಹಾಕಿ ದರೋಡೆ ಮಾಡಲಾಗದೆ.

ಹಾಡ ಹಗಲಲ್ಲೇ ಕೃತ್ಯ

ಬುಧವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಪ್ರೇಮಾ ಅವರ ಪತಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಪ್ರೇಮಾ ಅವರ ಮನೆಯ ಮಹಡಿ ಮೇಲಿನ ಮನೆ ಬಳಿ ಜೋರಾಗ ಶಬ್ದ ಬರುತ್ತಿತ್ತು. ಪ್ರೇಮಾ ಅವರು ಕಿಟಕಿಯಿಂದ ಮೆಟ್ಟಿಲ ಬಳಿ ನೋಡಿದ್ದಾರೆ. ಈ ವೇಳೆ ಇಬ್ಬರು ಅಪರಿಚಿತರು ಮೆಟ್ಟಿಲು ಇಳಿದು ಬಂದಿದ್ದಾರೆ. ‘ಯಾರು? ಯಾಕಿಲ್ಲಿ ಬಂದಿದ್ದೀರಾ?’ ಎಂದು ಪ್ರೇಮಾ ಅವರು ಪ್ರಶ್ನಿಸುತ್ತಿದ್ದಂತೆ, ಮನೆಯೊಳಗೆ ನುಗ್ಗಿದ್ದಾರೆ.

ಕೈ, ಕಾಲು ಕಟ್ಟಿ ಹಾಕಿದರು

ಮನೆಯೊಳಗೆ ನುಗ್ಗಿದ ಅಪರಿಚಿತರು, ಪ್ರೇಮಾ ಅವರ ಕುತ್ತಿಗೆ ಹಿಡಿದುಕೊಂಡು, ಬೆನ್ನ ಮೇಲೆ ಗುದ್ದಿದ್ದಾರೆ. ಬಟ್ಟೆಯೊಂದರಿಂದ ಕೈ , ಕಾಲು ಕಟ್ಟಿ ಹಾಕಿದ್ದಾರೆ. ಬಾಯಿಗೆ ಬಟ್ಟೆ ತುರುಕಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ಹಣ, ಬೀರುವಿನಲ್ಲಿದ್ದ ಬೆಳ್ಳಿಯ ಮಂಗಳ ಗೌರಿ ಮೂರ್ತಿಯನ್ನು ಕದ್ದೊಯ್ದಿದ್ದಾರೆ. ಅಲ್ಲದೆ ಪ್ರೇಮಾ ಅವರ ಮೊಬೈಲ್ ಫೋನನ್ನು ಕದ್ದುಕೊಂಡು ಹೋಗಿದ್ದಾರೆ.

ಬಿಡಿಸಿಕೊಂಡು ಬಂದು ದೂರು

ಕೈ, ಕಾಲು ಕಟ್ಟಿ ಹಾಕಿದ್ದರಿಂದ ಬಿಡಿಸಿಕೊಂಡು ಬಂದು ಪ್ರೇಮಾ ಅವರು ತಮ್ಮ ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಆ ಬಳಿಕ ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. 19 ಸಾವಿರ ರೂ. ನಗದು, 7700 ರೂ. ಮೊತ್ತದ ಮೊಬೈಲ್ ಫೋನ್, ಬೆಳ್ಳಿಯ ಮಂಗಳ ಗೌರಿ ಮೂರ್ತಿ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಚಾಕು ತೋರಿಸಿ ಬೆದರಿಕೆ, ಹಣ, ಮೊಬೈಲ್ ಕಸಿದ ದುಷ್ಕರ್ಮಿಗಳು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment