| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ: ರೋಟರಿ (Rotary) ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ನೇತೃತ್ವದಲ್ಲಿ ನಗರದ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ ಕ್ಲಬ್‌ನಲ್ಲಿ ನ.8, 9ರಂದು ರೋಟರಿ ದತ್ತಿನಿಧಿ ಮತ್ತು ಪೋಲಿಯೊ ಪ್ಲಸ್ ಕುರಿತ ‘ಸಮೃದ್ಧಿ 2025 ಕಾರ್ಯಾಗಾರ’ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ.ರಾಯ್ಕರ್ ತಿಳಿಸಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ಶಿವಮೊಗ್ಗ ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳನ್ನು ಸೇರಿಸಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಾಲ್ಕು ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ನ. 8ರಂದು ಸಂಜೆ 5.30ಕ್ಕೆ ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಸಾಂಬಶಿವ ರಾವ್ ಪತಿಬಂದ್ಲ, ರಾಜಾರಾಮ್ ಭಟ್, ಡಿ.ಎಸ್.ರವಿ, ಬಿ.ಎನ್. ರಮೇಶ್, ಬಿ.ಎಂ.ಭಟ್, ವಸಂತ್ ಹೋಬಳಿದಾರ್, ಕೆ.ಪಿ.ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನ. 9ರಂದು ಬೆಳಗ್ಗೆ 9.30ರಿಂದ ಐದು ವಿವಿಧ ವಿಷಯಗಳ ಕುರಿತು ವಿನಯ್ ಕುಮಾರ್ ಪೈ, ಕೆ.ಕೃಷ್ಣ ಶೆಟ್ಟಿ, ಕಾಶಿನಾಥ್ ಪ್ರಭು, ಡಾ. ಆರ್. ಎಸ್.ನಾಗಾರ್ಜುನ ಮತ್ತು ಡಾ. ಪಿ.ನಾರಾಯಣ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1ಕ್ಕೆ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
![]()
ರೋಟರಿ ದತ್ತಿನಿಧಿ ಮೂಲಕ ವಿಶ್ವಾದ್ಯಂತ ಆರೋಗ್ಯ, ಶಿಕ್ಷಣ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಪೋಲಿಯೊ ನಿರ್ಮೂಲನೆಗೆ 1.3 ಬಿಲಿಯನ್ ಡಾಲರ್ ವಿನಿಯೋಗಿಸಿದೆ.
- ವಸಂತ್ ಹೋಬಳಿದಾರ್, ನಿಯೋಜಿತ ಜಿಲ್ಲಾ ಗವರ್ನರ್
![]()
ಡಾ. ಗುಡದಪ್ಪ ಕಸಬಿ, ಜಿ. ವಿಜಯ ಕುಮಾರ್, ಡಿ.ಕಿಶೋರ್ ಕುಮಾರ್, ಡಾ. ಧನಂಜಯ ರಾಂಪುರ, ಡಿ.ಎಂ.ಜಲೇಂದ್ರ, ಜೆ. ರಾಧಾಕೃಷ್ಣ, ಲಕ್ಷ್ಮಣ್ ಬಾಬು ಮತ್ತಿತರರಿದ್ದರು.
ಇದನ್ನೂ ಓದಿ » ಭದ್ರಾವತಿ ಡಿವೈಎಸ್‌ಪಿಯಾಗಿ ದಕ್ಷತಾ ಪದಕ ವಿಜೇತ ಪೊಲೀಸ್ ಅಧಿಕಾರಿ
Rotary
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಾಲಿವುಡ್ ನಟರ ಫೋಟೊಗಳಿಗೆ ಚಪ್ಪಲಿ ಏಟು, ಕಾರಣವೇನು?
- ಆಯನೂರು ಸೇರಿ ಹಲವೆಡೆ ಡಿ.17ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಓದಲು ಇಲ್ಲಿ ಕ್ಲಿಕ್ ಮಾಡಿ
- ಅಡಿಕೆ ಧಾರಣೆ | 16 ಡಿಸೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
- ತಾಳಗುಪ್ಪ – ಬೆಂಗಳೂರು ರೈಲು ಅರಸೀಕೆರೆವರೆಗೆ ಮಾತ್ರ, ಯಶವಂತಪುರ ಎಕ್ಸ್ಪ್ರೆಸ್ಗೆ ಬದಲಿ ಮಾರ್ಗ
- ಶಿವಮೊಗ್ಗದಲ್ಲಿ ಮೂರು ದಿನ ಕಣ್ಣಿನ ಉಚಿತ ತಪಾಸಣೆ, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?
- ಶಿವಮೊಗ್ಗದ ಬಸವನಗುಡಿ, ವಿದ್ಯಾನಗರದಲ್ಲಿ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ
- ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು
- ಇವತ್ತು ಉತ್ತರಾಷಾಢ ನಕ್ಷತ್ರ, ದ್ವಾದಶಿ, ರಾಶಿ ಫಲ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
![]()