ಶಿವಮೊಗ್ಗ ಸಿಟಿ ಬಸ್‌: 4 ಮಾರ್ಗದ ಬದಲಾವಣೆ, ಡಿಸಿ ಆದೇಶ, ಯಾವ್ಯಾವ ಮಾರ್ಗ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ನಗರದ ಗೋಪಿ ಸರ್ಕಲ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, 4 ನಗರ ಸಾರಿಗೆ ಬಸ್‌ಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.

ಗೋಪಿ ಸರ್ಕಲ್‌ನಿಂದ ಜೆಪಿಎನ್ ರಸ್ತೆ, ಜ್ಯುವೆಲ್ ರಾಕ್ ಹೋಟೆಲ್ ರಸ್ತೆ, ಕುವೆಂಪು ರಸ್ತೆ ಹಾಗೂ ಜೈಲ್ ಸರ್ಕಲ್ ಮೂಲಕ ಲಕ್ಷ್ಮೀ ಟಾಕೀಸ್ ವರೆಗಿನ ಕಿರಿದಾದ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರದಿಂದ ದ್ವಿಚಕ್ರ ಮತ್ತು ಲಘು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ದೂರುಗಳು ಬಂದಿದ್ದವು. ಹಾಗಾಗಿ ಪೊಲೀಸ್ ಅಧೀಕ್ಷಕರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಸ್ತಾವನೆಯಂತೆ ಬಸ್‌ ಮಾರ್ಗಗಳ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಯಾವ್ಯಾವ ಬಸ್‌ ಮಾರ್ಗ ಬದಲಾವಣೆ?

Bus Route 1

ವಾಹನ ಸಂಖ್ಯೆ ಕೆಎ-19-ಎಬಿ-2246 (ಪರವಾನಿಗೆ ಸಂಖ್ಯೆ: 67/97-98): ಈತನಕ ಗೋಪಿ ಸರ್ಕಲ್ – ಮೆಗ್ಗಾನ್ ಆಸ್ಪತ್ರೆ ಗೇಟ್ – ಜ್ಯುವೆಲ್ ರಾಕ್ ಹೋಟೆಲ್ – ಕುವೆಂಪು ರಸ್ತೆ – ಪಿ ಅಂಡ್ ಟಿ ಕ್ವಾರ್ಟರ್ಸ್‌ ಮೂಲಕ ವಿನೋಬನಗರ ಮಾರ್ಗದಲ್ಲಿ ಚಲಿಸುತಿತ್ತು. ಇನ್ಮುಂದೆ ಗೋಪಿ ಸರ್ಕಲ್ – ಬಲರಾಜ ಅರಸ್ ಸರ್ಕಲ್ – ಮಹಾವೀರ್ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

DC-orders-Route-Change-for-city-buses

Bus Route 2

ವಾಹನ ಸಂಖ್ಯೆ ಕೆಎ-18-ಎಫ್‌-4235 (ಪರವಾನಿಗೆ ಸಂಖ್ಯೆ: 11/95-96): ಈತನಕ ಗೋಪಿ ಸರ್ಕಲ್ – ಜ್ಯುವೆಲ್ ರಾಕ್ ಹೋಟೆಲ್ ರಸ್ತೆ – ಕುವೆಂಪು ರಸ್ತೆ – ಜೈಲ್ ಸರ್ಕಲ್ – ಲಕ್ಷ್ಮೀ ಟಾಕೀಸ್ ಮಾರ್ಗವಾಗಿ ತೆರಳುತಿತ್ತು. ಇನ್ಮುಂದೆ ಗೋಪಿ ಸರ್ಕಲ್ – ಬಾಲರಾಜ ಅರಸ್ ಸರ್ಕಲ್ – ಮಹಾವೀರ ಸರ್ಕಲ್ – ಸವಳಂಗ ರಸ್ತೆ ಮೂಲಕ ಬದಲಾಯಿಸಲಾಗಿದೆ.

Bus Route 3

ವಾಹನ ಸಂಖ್ಯೆ ಕೆಎ-18-ಎಫ್‌-4235 (ಪರವಾನಿಗೆ ಸಂಖ್ಯೆ: 51/98-99): ಈತನಕ ಗೋಪಿ ಸರ್ಕಲ್‌ – ಮೆಗ್ಗಾನ್‌ ಆಸ್ಪತ್ರೆ ಗೇಟ್‌ – ಜ್ಯುವೆಲ್‌ ರಾಕ್‌ ಹೊಟೇಲ್‌ ರಸ್ತೆ – ಕುವೆಂಪು ರಸ್ತೆ – ಪಿ ಅಂಡ್‌ ಟಿ ಕ್ವಾರ್ಟರ್ಸ್‌ ಮೂಲಕ ವಿನೋಬನಗರ ತಲುಪಿತಿತ್ತು. ಇನ್ಮುಂದೆ ಗೋಪಿ ಸರ್ಕಲ್‌ – ಬಾಲರಾಜ ಅರಸ್ ರಸ್ತೆ – ಮಹಾವೀರ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.

Bus Route 4

ವಾಹನ ಸಂಖ್ಯೆ ಕೆಎ-20-ಎಫ್‌-2199 (ಪರವಾನಿಗೆ ಸಂಖ್ಯೆ: 63/92-93): ಈ ಬಸ್‌ ಕೂಡ ಇನ್ಮುಂದೆ ಗೋಪಿ ಸರ್ಕಲ್‌ನಿಂದ ಬಾಲರಾಜ ಅರಸ್ ಸರ್ಕಲ್ – ಮಹಾವೀರ ಸರ್ಕಲ್ – ಸವಳಂಗ ರಸ್ತೆ ಮಾರ್ಗದ ಮೂಲಕ ಬದಲಿ ಮಾರ್ಗದಲ್ಲಿ ಸಂಚರಿಸಲಿದೆ.