SHIVAMOGGA LIVE NEWS | 24 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಕೆಲವು ರಾಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಕೆಲವು ರಸ್ತೆಯಲ್ಲಿ ಮಾರ್ಗ ಬದಲಾವಣೆ (Route Diversion) ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.
ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಗಣ್ಯರು ಆಗಮಿಸುತ್ತಿದ್ದಾರೆ. ಅಲ್ಲದೆ ಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಭದ್ರಾವತಿ, ದಾವಣಗೆರೆ, ಉಡುಪಿ, ಮಂಗಳೂರು, ತರೀಕೆರೆ ಸೇರಿ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮಾರ್ಗಗಳ ಬದಲಾವಣೆ (Route Diversion) ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶೂನ್ಯ ಸಂಚಾರ ಮಾರ್ಗ
ಫೆ.26 ಮತ್ತು ಫೆ.27ರಂದು ಎರಡು ರಸ್ತೆಗಳನ್ನು ಶೂನ್ಯ ಸಂಚಾರ ಮಾರ್ಗ ಎಂದು ಘೋಷಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಎರಡು ಮಾರ್ಗಗಳನ್ನು ಶೂನ್ಯ ಸಂಚಾರ ರಸ್ತೆ ಎಂದು ಘೋಷಿಸಲಾಗಿದೆ.
ರಸ್ತೆ 1 : ಎಂ.ಆರ್.ಎಸ್ ಸರ್ಕಲ್ ನಿಂದ ಎನ್.ಆರ್.ಪುರ ರಸ್ತೆ ಲಕ್ಕಿನಕೊಪ್ಪ ಸರ್ಕಲ್ ವರೆಗೆ
ರಸ್ತೆ 2 : ಮತ್ತೂರು ಮಂಡೇನಕೊಪ್ಪ ಸೋಗಾನೆ ವಿಮಾನ ನಿಲ್ದಾಣದವರೆಗೆ
ವಾಹನಗಳಿಗೆ ಬದಲಿ ಮಾರ್ಗ
ಫೆ.27ರಂದು ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮವಿದೆ. ಈ ಹಿನ್ನೆಲೆ ಫೆ.27ರಂದು ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಮಾರ್ಗ 1 : ಎನ್.ಆರ್.ಪುರದಿಂದ ಭದ್ರಾವತಿ ಕಡೆಗೆ ಹೋಗುವ ವಾಹನಗಳು : ಉಂಬ್ಳೆಬೈಲು ಹುಣಸೆಕಟ್ಟೆ ಜಂಕ್ಷನ್ ಮೂಲಕ ಭದ್ರಾವತಿ ತಲುಪಬೇಕು.
ಮಾರ್ಗ 2 : ಶಿಕಾರಿಪುರ ಹೊನ್ನಾಳಿ ದಾವಣಗೆರೆಯಿಂದ ಎನ್.ಆರ್.ಪುರಕ್ಕೆ ಹೋಗುವ ವಾಹನಗಳು : ಶಿವಮೊಗ್ಗ ನಗರಕ್ಕೆ ಬಂದು ತೀರ್ಥಹಳ್ಳಿ ರಸ್ತೆ (ಎನ್.ಟಿ.ರೋಡ್) ಮೂಲಕ ಎನ್.ಆರ್.ಪುರಕ್ಕೆ ಹೋಗಬೇಕು.
ಮಾರ್ಗ 3 : ತೀರ್ಥಹಳ್ಳಿ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ವಾಹನಗಳು : ನ್ಯೂ ಮಂಡ್ಲಿ ಸರ್ಕಲ್ – ಗೋಪಾಳ ಸರ್ಕಲ್ – ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರಬೇಕು.
ಮಾರ್ಗ 4 : ಸಾಗರ ರಸ್ತೆ ಕಡೆಯಿಂದ ತೀರ್ಥಹಳ್ಳಿ ರಸ್ತೆ ಕಡೆಗೆ ಹೋಗುವ ವಾಹನಗಳು : ಆಲ್ಕೊಳ ಸರ್ಕಲ್ – ಗೋಪಾಳ ಸರ್ಕಲ್ – ನ್ಯೂ ಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ತಲುಪಬೇಕು.
ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಮಾರ್ಗ
ಇನ್ನು, ಫೆ.27ರಂದು ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಬರುವ ವಾಹನಗಳಿಗೆ ಪ್ರತ್ಯೇಕ ಮಾರ್ಗ ಸೂಚಿಸಲಾಗಿದೆ.
ಇದನ್ನೂ ಓದಿ – ವಿಮಾನದ ರನ್ ವೇ ರೀತಿ ರೆಡಿಯಾಗ್ತಿದೆ ಶಿವಮೊಗ್ಗ – ಕಾಚಿನಕಟ್ಟೆ ರೋಡ್, ಭಯ ಹುಟ್ಟಿಸಿದ್ದ ಗುಂಡಿಗಳೆಲ್ಲ ಈಗ ಬಂದ್
ಮಾರ್ಗ 1 : ಕಾರ್ಯಕ್ರಮಕ್ಕೆ ಆಗಮಿಸುವ ವಿವಿಐಪಿ ಪಾಸ್ ಹೊಂದಿರುವ ಗಣ್ಯರ ವಾಹನಗಳು ಶಿವಮೊಗ್ಗ ಬೈಪಾಸ್ – ಊರಗಡೂರು ಸರ್ಕಲ್ – ಸೂಳೆಬೈಲು – ಮತ್ತೂರು ರಸ್ತೆ ಎಡ ಭಾಗಕ್ಕೆ ತಿರುವು ಪಡೆದು ಮಂಡೇನಕೊಪ್ಪ ಮೂಲಕ ಸೋಗಾನೆ ವಿಮಾನ ನಿಲ್ದಾಣಕ್ಕೆ ತಲುಪಬೇಕು.
ಮಾರ್ಗ 2 : ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಕಡೆಯಿಂದ ಕಾರ್ಯಕ್ರಮಕ್ಕೆ ಬರುವವರು : ತೀರ್ಥಹಳ್ಳಿ ರಸ್ತೆ – ಮುಡುಬ ಬಲಕ್ಕೆ ತಿರುಗಿ ಶಂಕರಪುರ ಉಂಬ್ಳೆಬೈಲು ಮೂಲಕ ಲಕ್ಕಿನಕೊಪ್ಪ ಸರ್ಕಲ್ ಗೆ ಬಂದು ಸೇರಬೇಕು. ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು.
ಮಾರ್ಗ 3 : ಸಾಗರ, ಶಿಕಾರಿಪುರ, ಸೊರಬ, ಹೊಸನಗರದಿಂದ ಕಾರ್ಯಕ್ರಮಕ್ಕೆ ಬರುವವರು : ಶಿವಮೊಗ್ಗ ನಗರದಿಂದ ಅಶೋಕ ಸರ್ಕಲ್ – ಬಿ.ಹೆಚ್.ರಸ್ತೆ – ಎಎ ಸರ್ಕಲ್ – ಶಂಕರ ಮಠ ಸರ್ಕಲ್ – ಹೊಳೆಹೊನ್ನೂರು ಸರ್ಕಲ್ – ಎಂ.ಆರ್.ಎಸ್ ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೆ ಕಡೂರು ಸೋಗಾನೆ ಏರ್ ಪೋರ್ಟ್ ನಡುವೆ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು.
ಇದನ್ನೂ ಓದಿ – ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ಹೋಗುವವರು ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು
ಮಾರ್ಗ 4 : ಶಿಕಾರಿಪುರ, ಹೊನ್ನಾಳಿ, ದಾವಣಗೆರೆ ಕಡೆಯಿಂದ ಕಾರ್ಯಕ್ರಮಕ್ಕೆ ಬರುವವರು : ಎಂ.ಆರ್.ಎಸ್ ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೆ ಕಡೂರು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು.
ಮಾರ್ಗ 5 : ಶಿವಮೊಗ್ಗ ನಗರದಿಂದ ಕಾರ್ಯಕ್ರಮಕ್ಕೆ ಬರುವವರು : ಎಂ.ಆರ್.ಎಸ್ ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೆ ಕಡೂರು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು.
ಮಾರ್ಗ 6 : ತರೀಕೆರೆ, ಭದ್ರಾವತಿ, ಕಡೂರು, ಚಿಕ್ಕಮಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವವರು : ಭದ್ರಾವತಿ ನಗರದ ಕೃಷ್ಣಪ್ಪ ಸರ್ಕಲ್ ನಿಂದ ಎಡಕ್ಕೆ ತಿರುಗಿ ಹಿರಿಯೂರು ಸರ್ಕಲ್, ತಾರೀಕಟ್ಟೆ ಸರ್ಕಲ್, ಹೆಚ್.ಕೆ.ಜಂಕ್ಷನ್, ಲಕ್ಕಿನಕೊಪ್ಪ ಸರ್ಕಲ್ ಗೆ ಬಂದು ಸೇರಬೇಕು. ಬಳಿಕ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿದ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು.