ಶಿವಮೊಗ್ಗದಲ್ಲಿ RSS ಪಥಸಂಚಲನ, ಗಣವೇಷ ಧರಿಸಿ ಪಾಲ್ಗೊಂಡರು ಸಂಸದ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಅಕ್ಟೋಬರ್ 2021

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವತಿಯಿಂದ ಇವತ್ತು ಶಿವಮೊಗ್ಗ ನಗರದಲ್ಲಿ ವಿಜಯದಶಮಿ ಪಥಸಂಚಲನ ಆಯೋಜಿಸಲಾಗಿತ್ತು. ನಗರದ ವಿವಿಧೆಡೆ RSS ಕಾರ್ಯಕರ್ತರು ಪಥಸಂಚಲನ ನಡೆಸಿದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಬಿಜೆಪಿ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗಣವೇಷ ತೊಟ್ಟು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗದ ಸೈನ್ಸ್ ಮೈದಾನದಿಂದ ಹೊರಟ ಮೆರವಣಿಗೆ ಬಿ.ಹೆಚ್.ರಸ್ತೆ, ಗಾಂಧಿ ಬಜಾರ್ ಸೇರಿದಂತೆ ವಿವಿಧೆಡೆ ಸಾಗಿತು. RSS ಬ್ಯಾಂಡ್, ಗಣವೇಷ, ದಂಡ ಹಿಡಿದು ಕಾರ್ಯಕರ್ತರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಹಿರಿಯ ಸ್ವಯಂ ಸೇವಕರಾದ ಭಾಮಾ ಶ್ರೀಕಂಠ, ಗಿರೀಶ್ ಕಾರಂತ್, ಮುಖ್ಯ ಶಿಕ್ಷಕ್ ಪಣೀಶ್, ನಗರ ಕಾರ್ಯವಾಹ ಚೇತನ್ ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.

ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

SHIVAMOGGA LIVE CONTATCT

LifeSpring%2BKan%2B02

1632381444428179 2

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment