SHIVAMOGGA LIVE NEWS, 7 DECEMBER 2024
ಶಿವಮೊಗ್ಗ : ಸರ್ಜಿ ಆಸ್ಪತ್ರೆಗಳ ಸಮೂಹ ಇನ್ಮುಂದೆ ಪೇಪರ್ ಮುಕ್ತವಾಗಲಿದೆ (Paperless). ಪ್ರತಿ ರೋಗಿಯ ಚಿಕಿತ್ಸಾ ವಿವರವು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ಪರಿಸರ ಹಾನಿ ತಪ್ಪಲಿದೆ, ಚಿಕಿತ್ಸೆ ಮತ್ತಷ್ಟು ಸುಗಮವಾಗಲಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ.ಧನಂಜಯ ಸರ್ಜಿ ತಿಳಿಸಿದರು.
ಶಿವಮೊಗ್ಗ ಲೈವ್.ಕಾಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಧನಂಜಯ ಸರ್ಜಿ, ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದರಲ್ಲೇ ವರ್ಷಕ್ಕೆ ಸರಾಸರಿ ಮೂರು ಟನ್ ಪೇಪರ್ ಬಳಕೆ ಆಗುತ್ತಿದೆ. ಇಷ್ಟು ಪೇಪರ್‌ಗೆ 76 ಮರಗಳು ಬಳಸಬೇಕಾಗುತ್ತದೆ. ಇದೊಂದೆ ಆಸ್ಪತ್ರೆಯಿಂದ ಇಷ್ಟು ಮರಗಳನ್ನು ಉಳಿಸಿದಂತಾಗುತ್ತದೆ ಎಂದರು.
ಸರ್ಜಿ ಸಮೂಹದ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಸರಾಸರಿ 6.50 ಲಕ್ಷ ಎ4 ಪೇಪರ್ ಬಳಕೆ ಆಗುತ್ತಿದೆ. ಇನ್ಮುಂದೆ ಆ ಪ್ರಮೇಯ ತಪ್ಪಲಿದೆ. ಇದರಿಂದ 250 ಮರಗಳನ್ನು ಉಳಿಸಿದಂತಾಗಲಿದೆ. ಪೇಪರ್ ತಯಾರಿಗೆ ರಾಸಾಯನಿಕ ಬಳಕೆ, ಪರಿಸರ ಹಾನಿ ತಪ್ಪಲಿದೆ.
ಡಾ.ಧನಂಜಯ ಸರ್ಜಿ, ಸರ್ಜಿ ಸಮೂಹದ ಛೇರ್ಮನ್
ಸಿಬ್ಬಂದಿ ಮತ್ತು ರೋಗಿಗಳಿಗು ಅನುಕೂಲ
ಪ್ರತಿ ರೋಗಿಗೆ ಪ್ರತ್ಯೇಕವಾಗಿ ಯುನಿಕ್ ಐಡಿಯೊಂದಿಗೆ ಡಿಜಿಟಲ್ ಫೈಲ್ ತೆರೆಯಲಾಗುತ್ತದೆ. ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಟ್ಯಾಬ್‌ಗಳಲ್ಲಿ ದಾಖಲು ಮಾಡಲಿದ್ದಾರೆ. ಕೇಸ್ ಶೀಟ್ ರೀತಿಯಲ್ಲೇ ಡಿಜಿಟಲ್ ರೂಪದಲ್ಲಿ ಕೇಸ್ ಶೀಟ್ ಸಿದ್ಧವಾಗಲಿದೆ. ವೈದ್ಯರು ಮನೆಯಲ್ಲಿದ್ದರು ಈ ಕೇಸ್ ಶೀಟ್ ಗಮನಿಸಬಹುದು. ಇದರಿಂದ ಮತ್ತಷ್ಟು ಗುಣಮಟ್ಟದ ಚಿಕಿತ್ಸೆ ಕೊಡಬಹುದಾಗಿದೆ ಎಂದರು.
ಪ್ರತಿ ಆರು ಪೇಷೆಂಟ್‌ಗೆ ಒಂದು ಟ್ಯಾಬ್ ಮೀಸಲಿರಲಿದೆ. ನರ್ಸಿಂಗ್ ಸಿಬ್ಬಂದಿ ಇದರಲ್ಲಿ ವಿವರಗಳನ್ನು ದಾಖಲು ಮಾಡಬಹುದು. ಯಾರೆಂದರೆ ಅವರು ಇದನ್ನು ಎಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ಡಿಸ್ಚಾರ್ಜ ಆಗುವಾಗ ರೋಗಿಯ ವಾಟ್ಸಪ್‌ಗೆ ವಿವರಗಳನ್ನು ಕಳುಹಿಸಲಾಗುತ್ತದೆ. ಮೂರು ವರ್ಷದವರೆಗೆ ವೈದ್ಯಕೀಯ ವಿವರಗಳು ನಮ್ಮ ಬಳಿ ಸಂಗ್ರಹವಾಗಿರಲಿದೆ.
ಡಾ. ಧನಂಜಯ ಸರ್ಜಿ, ಸರ್ಜಿ ಸಮೂಹದ ಛೇರ್ಮನ್
ಇಲ್ಲಿ ಸಂಗ್ರಹವಾಗುವ ಪ್ರತಿ ದಾಖಲೆಯ ಮೂರು ಕಾಪಿಗಳು ನಮ್ಮ ಬಳಿ ಇರಲಿದೆ. ಈ ವ್ಯವಸ್ಥೆಯನ್ನು ಯಾರು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಾಖಲೆಗಳು ಅತ್ಯಂತ ಸುರಕ್ಷಿತವಾಗಿರಲಿದೆ.
ಅಕ್ಷಯ್ ನಾಯಕ್, ಅನ್‌ರಿಡಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್
ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಎಸ್.ವೀರಯ್ಯ, ವೈದ್ಯಕೀಯ ಅಧೀಕ್ಷಕ ಡಾ. ವಿಜಯ್ ಕುಮಾರ್ ಮಾಯೇರ, ಬಿ.ಎಸ್.ಕಾರ್ತಿಕ್ ಇದ್ದರು.
ಇದನ್ನೂ ಓದಿ » ಕೇಂದ್ರ ಸಂಪುಟ ಸಭೆ, ಶಿವಮೊಗ್ಗ ಕೇಂದ್ರಿಯ ವಿದ್ಯಾಲಯ ಕುರಿತು ಮಹತ್ವದ ನಿರ್ಧಾರ