SHIVAMOGGA LIVE | 8 JUNE 2023
SHIMOGA : ಯಾರೂ ಇಲ್ಲದ ವೇಳೆ ಮನೆ ಬಾಗಿಲಿನ ಇಂಟರ್ ಲಾಕ್ ಮುರಿದು ಒಂದು ಲಕ್ಷ ರೂ. ಮೌಲ್ಯದ ಸೌದಿ ಅರೇಬಿಯಾ ದೇಶದ ಕರೆನ್ಸಿ (Currency) ಕಳ್ಳತನ ಮಾಡಲಾಗಿದೆ. ಒಂದು ವರ್ಷದ ಬಳಿಕ ಮನೆಯವರು ಸೌದಿ ಅರೇಬಿಯಾ ದೇಶದಿಂದ ಶಿವಮೊಗ್ಗದ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಆರ್‌ಎಂಎಲ್ ನಗರದ ಸಲ್ಮಾ ಖಾನಂ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸಲ್ಮಾ ಖಾನಂ ಅವರ ಪತಿ ಸೌದಿ ಅರೇಬಿಯಾ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಈ ಹಿನ್ನೆಲೆ ಸಲ್ಮಾ ಖಾನಂ ಅವರು ಕಳೆದ ವರ್ಷದ ಮೇ ತಿಂಗಳಲ್ಲಿ ಅಲ್ಲಿಗೆ ತೆರಳಿದ್ದರು. ಜೂ. 6ರಂದು ಬೆಳಗಿನ ಜಾವ ಶಿವಮೊಗ್ಗದ ಮನೆಗೆ ಮರಳಿದಾಗ ಬಾಗಿಲಿನ ಇಂಟರ್‌ಲಾಕ್ ಮುರಿದಿರುವುದು ಗೊತ್ತಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜನಶತಾಬ್ದಿ, ಯಶವಂತಪುರ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್, ರೈಲ್ವೆ ಇಲಾಖೆಯಿಂದ ಆದೇಶ
ಮನೆಯ ಒಳಗೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಬೀರುವಿನಲ್ಲಿ ಇಟ್ಟಿದ್ದ ಸೌದಿ ಅರೇಬಿಯಾದ ಕರೆನ್ಸಿ (Currency) ಮತ್ತು ಚಿನ್ನಾಭರಣ ನಾಪತ್ತೆಯಾಗಿವೆ. ಸೌದಿ ಅರೇಬಿಯಾ ಕರೆನ್ಸಿ 500 ರಿಯಾಲ್ ಮುಖಬೆಲೆಯ 9 ನೋಟುಗಳ ಕಳ್ಳತನವಾಗಿದೆ. ಭಾರತೀಯ ರುಪಾಯಿಗಳಲ್ಲಿ ಇದರ ಮೌಲ್ಯ 1,03,500 ರೂ. ಇದೆ. ಇನ್ನು, ಚಿನ್ನಾಭರಣ ಮತ್ತು ಇತರೆ ವಸ್ತುಗಳು ಕಳ್ಳತನವಾಗಿರುವ ಶಂಕೆ ಇದೆ. ಇದರ ಪರಿಶೀಲನೆ ನಡೆಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ