ಬ್ಯಾಂಕಿನಲ್ಲಿ ಹಣ ಬಿಡಿಸಲು ಚೆಕ್ ನೀಡಿದ ಶಿವಮೊಗ್ಗದ ನೌಕರನಿಗೆ ಕಾದಿತ್ತ ಶಾಕ್, SMS ತಂದ ಸಂಕಷ್ಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 JANUARY 2023

SHIMOGA | ಎಸ್ಎಂಎಸ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಶಿವಮೊಗ್ಗ ಜಿಲ್ಲೆಯ ನೌಕರರೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 1.73 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಎಸ್.ಬಿ.ಐ ಬ್ಯಾಂಕ್ (SBI YONO) ಹೆಸರನ್ನು ದುರ್ಬಳಕೆ ಮಾಡಿಕೊಂಡು, ವಂಚನೆ ಮಾಡಲಾಗಿದೆ.

YONO Fraud Message Alert

ಪ್ಯಾನ್ ಕಾರ್ಡ್ ಅಪ್ ಡೇಟ್

ಶಿವಮೊಗ್ಗ ಜಿಲ್ಲೆಯ ನೌಕರರೊಬ್ಬರ (ಹೆಸರು ಗೌಪ್ಯ) ಮೊಬೈಲ್ ಗೆ ಅಪರಿಚಿತ ಮೊಬೈಲ್ ನಂಬರಿನಿಂದ ಮೆಸೇಜ್ ಬಂದಿತ್ತು. Dear SBI User Your SBI YONO Account will be blocked today please Update your Pan Card immediately click here ಎಂದು ಲಿಂಕ್ ಕಳುಹಿಸಲಾಗಿತ್ತು. ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗ ಜಿಲ್ಲೆಯ ನೌಕರ ಪ್ಯಾನ್ ಕಾರ್ಡ್ ನಂಬರ್ ಅಪ್ ಡೇಟ್ ಮಾಡಿದ್ದಾರೆ. ಕೆಲವೆ ಹೊತ್ತಿನಲ್ಲಿ ಮೂರು ಒಟಿಪಿ ಬಂದಿದ್ದು, ಆಟೋ ಫಿಲ್ ಆಗಿದೆ.

ಬ್ಯಾಂಕಿಗೆ ಹೋದಾಗ ಶಾಕ್

ಶಿವಮೊಗ್ಗ ಜಿಲ್ಲೆಯ ನೌಕರನ ಖಾತೆಗೆ ವೈದ್ಯಕೀಯ ಮರು ಪಾವತಿ ಹಣ 2.18 ಲಕ್ಷ ರೂ. ಬಂದಿತ್ತು. ಅದೆ ದಿನ ಪ್ಯಾನ್ ಕಾರ್ಡ್ ಅಪ್ ಡೇಟ್ ಲಿಂಕ್ ಬಂದಿತ್ತು. ಅಪ್ ಡೇಟ್ ಮಾಡಿದ ಮರುದಿನ ನೌಕರ ಬ್ಯಾಂಕಿಗೆ ತೆರಳಿದ್ದು, ಚೆಕ್ ನೀಡಿ ಹಾ ಡ್ರಾ ಮಾಡಲು ಮುಂದಾಗಿದ್ದಾರೆ. ಆಗ ಬ್ಯಾಂಕ್ ಸಿಬ್ಬಂದಿ ತಮ್ಮ ಖ್ಯಾತೆಯಿಂದ ಮೂರ ಭಾರಿ ಹಣ ವರ್ಗಾವಣೆ ಆಗಿರುವುದನ್ನು ತಿಳಿಸಿದ್ದಾರೆ. 1.73 ಲಕ್ಷ ರೂ. ಹಣ ವರ್ಗಾವಣೆಯಾಗಿತ್ತು.

ಇದನ್ನೂ ಓದಿ – ‘ಕಸ್ಟಮರ್ ಕೇರ್’ಗೆ ಕರೆ ಮಾಡಿದ್ಮೇಲೆ ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಬರೀ 2 ರೂ..!

CEN-Police-Station-General-Image

ಅನುಮಾನಾಸ್ಪದ ಲಿಂಕ್ ಬಗ್ಗೆ ಎಚ್ಚರ

ಜಗತ್ತಿನಾದ್ಯಂತ ಆನ್ ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಅನುಮಾನಾಸ್ಪದ, ಅಪರಿಚಿತ ಮೊಬೈಲ್ ನಂಬರ್ ಗಳಿಂದ ಬರುವ ಯಾವುದೆ ಲಿಂಕುಗಳನ್ನು ಕ್ಲಿಕ್ ಮಾಡುವುದು ಅಪಾಯಕ್ಕೆ ಎಡೆಮಾಡಿಕೊಟ್ಟಂತೆ. ಪ್ಯಾನ್ ಕಾರ್ಡ್ ಅಪ್ ಡೇಟ್ ಮಾಡಿ, ನಿಮ್ಮ ಎಟಿಎಂ ರಿನಿವಲ್ ಮಾಡಿ, ಹೊಸ ವರ್ಷದ ಆಫರ್, ಸಂಕ್ರಾಂತಿ ಸ್ಪೆಷಲ್, ಗಣರಾತ್ಯೋತ್ಸವದ ಧಮಾಕದ ಹೆಸರಿನಲ್ಲಿಯು ಲಿಂಕುಗಳು ಬರುತ್ತವೆ. ಯಾವುದೆ ಲಿಂಕುಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ – ಸಂಸದ ರಾಘವೇಂದ್ರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ಲಪಟಾಯಿಸಿದ್ದ ಮುಂಬೈ ಹ್ಯಾಕರ್

ಹೆಚ್ಚಿನ ಮಾಹಿತಿಗೆ ಸರ್ಕಾರದ https://cybercrime.gov.in/ ವೆಬ್ ಸೈಟ್ ಪರಿಶೀಲಿಸಿ. ಸೈಬರ್ ವಂಚಕರ ಬಲೆಗೆ ಬಿದ್ದಿರುವ ಅನುಮಾನ ವ್ಯಕ್ತವಾಗಿದರೆ, ತಕ್ಷಣವೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಕಟ್ಟಡದಲ್ಲಿಯೆ ಇರುವ ಸೈಬರ್ ಕ್ರೈಮ್ ಸಿಇಎನ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ದೂರು ದಾಖಲಿಸಿ.

ಇದನ್ನೂ ಓದಿ – ಶಿವಮೊಗ್ಗ ನಿಲ್ದಾಣದಲ್ಲಿ ನೀರಿನ ಬಾಟಲಿ ಕೊಂಡು ಬಸ್ ಹತ್ತಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ

Shimoga Live 3 Million Views

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 22, 2023

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?‌ –  27 ಮಾರ್ಚ್‌ 2026

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?‌ –  27 ಮಾರ್ಚ್‌ 2026

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

Leave a Comment