ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್‌ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಹೆಸರಿನಲ್ಲಿ ವಿದೇಶಿ ನಂಬರ್‌ನಲ್ಲಿ (Scammers) ವಾಟ್ಸಪ್‌ ಖಾತೆ ತೆರೆದು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಮೆಸೇಜ್‌ ಕಳುಹಿಸಲಾಗುತ್ತಿದೆ. ಈ ಸಂಬಂಧ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ » ಮಹಿಳೆಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ಜನವರಿ 17ರಿಂದ ಮೇಳ, ಏನೇನೆಲ್ಲ ಇರಲಿದೆ?

ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಏನಿದೆ?

ನನ್ನ ಹೆಸರು ಮತ್ತು ಭಾವಚಿತ್ರವನ್ನು ಸೈಬರ್ ವಂಚಕರು ಬಳಸಿಕೊಂಡಿದ್ದಾರೆ. ವಿದೇಶಿ ಸಂಖ್ಯೆ +84 56 455 2858 ಹೊಂದಿರುವ ವಾಟ್ಸಾಪ್ ನಂಬರ್ ಮೂಲಕ ಇತ್ತೀಚೆಗೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ನಕಲಿ ಸಂದೇಶ ಕಳುಹಿಸುತ್ತಿದ್ದಾರೆ. ಇದರು ನನ್ನ ಗಮನಕ್ಕೆ ಬಂದಿದೆ.

Fake-Whatsapp-in-the-name-of-Shimoga-DC-Prabhulinga-Kavalikatti

ಈ ಸಂದೇಶಗಳು ಸೈಬರ್ ವಂಚಕರ ಕೃತ್ಯವಾಗಿದೆ. ಆದ್ದರಿಂದ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನಕಲಿ ವಾಟ್ಸಾಪ್ ಸಂದೇಶಕ್ಕೆ ಪ್ರತಿಕ್ರಿಯೆ ನೀಡಬಾರದು. ಇಂತಹ ಸಂಖ್ಯೆಯಿಂದ ಹಣದ ಬೇಡಿಕೆ, ತಪ್ಪು ಸಂದೇಶ ಹಾಗೂ ಸಹಾಯ ಕೋರಿ ನಕಲಿ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ, ಮೊಬೈಲ್ ವಾಟ್ಸಾಪ್‌ ಮುಖಾಂತರ ಬಂದಲ್ಲಿ ಅವುಗಳನ್ನು ನಿರ್ಲಕ್ಷಿಸಲು ತಿಳಿಸಿದ್ದಾರೆ. ಅಲ್ಲದೆ ಆ ಸಂಖ್ಯೆಯನ್ನು ಬ್ಲಾಕ್ ಮಾಡಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment