SHIVAMOGGA LIVE NEWS | 22 ಮಾರ್ಚ್ 2022
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಿದ ಮುಖ್ಯ ಶಿಕ್ಷಕಿಯನ್ನು ಶಾಲೆ ಆಡಳಿತ ಮಂಡಳಿ ಅಮಾನತು ಮಾಡಿದೆ.
ಮುಖ್ಯ ಶಿಕ್ಷಕಿ ಜಬೀನಾ ಪರ್ವಿನ್ ಅಮಾನತಾದವರು. ಪ್ರತಿದಿನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಮುಖ್ಯ ಶಿಕ್ಷಕಿ ಅವಕಾಶ ಕಲ್ಪಿಸಿದ್ದರು ಎಂಬ ಆರೋಪವಿದೆ.
ವೈರಲ್ ಆಗಿತ್ತು ವಿಡಿಯೋ
ತರಗತಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರು ಹೈಕೊರ್ಟ್ ಆದೇಶದ ಕುರಿತು ತಿಳಿಸಿದ್ದರು. ಇದರ ಬೆನ್ನಿಗೆ ಮುಖ್ಯ ಶಿಕ್ಷಕಿ ಜಬೀನಾ ಪರ್ವಿನ್ ಅವರನ್ನು ಶಾಲೆ ಆಡಳಿತ ಮಂಡಳಿ ಅಮಾನತು ಮಾಡಿದೆ. ಗೋಪಾಳದ ಶಾಲೆಯಲ್ಲಿ ಘಟನೆ ಸಂಭವಿಸಿತ್ತು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200