SHIVAMOGGA LIVE NEWS | 28 ಫೆಬ್ರವರಿ 2022
ಒಂದು ವಾರದ ಬಳಿಕ ಶಿವಮೊಗ್ಗ ನಗರದಲ್ಲಿ ಶಾಲೆ, ಕಾಲೇಜುಗಳು ಪುನಾರಂಭವಾಗಿವೆ. ತಣ್ಣಗಾಗಿದ್ದ ಹಿಜಾಬ್ ವಿವಾದ ಪುನಃ ತಲೆ ಎತ್ತಿದೆ. ಹಿಜಾಬ್ ತೆಗೆಯುವಂತೆ ತಿಳಿಸಿದ್ದರಿಂದ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸದೆ ಹೊರಗೆ ನಿಂತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಡಿವಿಎಸ್ ಕಾಲೇಜಿನಲ್ಲಿ ಸಮವಸ್ತ್ರದೊಂದಿಗೆ ಕಾಲೇಜಿನ ಒಳಗೆ ಬರುವಂತೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಈ ಸಂಬಂಧ ಗೇಟ್ ಮುಂಭಾಗ ನೊಟೀಸ್ ಕೂಡ ಅಂಟಿಸಲಾಗಿದೆ. ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಕಾಲೇಜು ಆವರಣವನ್ನು ಪ್ರವೇಶಿಸಲು ನಿರಾಕರಿಸಿದ್ದಾರೆ.
ಕಾಲೇಜು ಮುಂದೆ ನಿಂತ ವಿದ್ಯಾರ್ಥಿನಿಯರು
ಸುಮಾರು 20 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದಾರೆ. ತರಗತಿಗೆ ಹೋಗದೆ ಕಾಲೇಜು ಮುಂಭಾಗ ಮೌನವಾಗಿ ನಿಂತಿದ್ದಾರೆ. ಉಪನ್ಯಾಸಕರು ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನವು ವಿಫಲವಾಗಿದೆ.
ಉಳಿದ ಕಾಲೇಜು ಸಹಜ ಸ್ಥಿತಿಗೆ
ಶಿವಮೊಗ್ಗ ನಗರದ ಉಳಿದ ಕಾಲೇಜುಗಳಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ತರಗತಿಗಳಿಗೆ ಪ್ರವೇಶಿಸಿದ್ದು, ಪಾಠ ಕೇಳುತ್ತಿದ್ದಾರೆ.
ಹಿಜಾಬ್, ಕೇಸರಿ ಶಾಲು ಸಂಘರ್ಷ, ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಶಾಲೆ, ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆದಿರಲಿಲ್ಲ. ಕೆಲವು ಕಾಲೇಜುಗಳಲ್ಲಿ ಆನ್ ಲೈನ್ ತರಗತಿ ನಡೆಸಲಾಗಿತ್ತು. ಈಗ ಶಾಲೆ, ಕಾಲೇಜು ಪುನಾರಂಭವಾಗಿದ್ದು, ಸಣ್ಣಮಟ್ಟದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ.
ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಶಾಲೆ, ಕಾಲೇಜುಗಳ ಬಳಿಯು ಪೊಲೀಸರನ್ನು ನಿಯೋಜಿಸಲಾಗಿದೆ.