ಶಿವಮೊಗ್ಗ ಲೈವ್.ಕಾಂ | SHIMOGA | 10 ಏಪ್ರಿಲ್ 2020
ಶಿವಮೊಗ್ಗ ನಗರದಲ್ಲಿ ಲಾಕ್’ಡೌನ್ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ನಗರದಾದ್ಯಂತ ಸೆಕ್ಟರ್ ವೈಸ್ ಲಾಕ್’ಡೌನ್ ಜಾರಿಗೆ ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಸೆಕ್ಟರ್ ವೈಸ್ ಲಾಕ್’ಡೌನ್?
ಬಿ.ಹೆಚ್.ರಸ್ತೆ, ನೆಹರು ರಸ್ತೆ, ನೂರು ಅಡಿ ರಸ್ತೆ, ಸವಳಂಗ ರೋಡ್, ಬಾಲರಾಜ ಅರಸ್ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳು, ಒಳ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬಡಾವಣೆವಾರು ಬ್ಯಾರಿಕೇಡ್ ಹಾಕಲಾಗಿದೆ. ಒಂದು ಬಡಾವಣೆ ಜನರು ಮತ್ತೊಂದು ಬಡಾವಣೆಗೆ ಹೋಗದಂತೆ ತಡೆಯಲು ಬ್ಯಾರಿಕೇಡ್ ಆಳವಡಿಸಲಾಗಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ.
ಪ್ರತಿ ಸರ್ಕಲ್’ನಲ್ಲೂ ಬ್ಯಾರಿಕೇಡ್
ಅಮೀರ್ ಅಹಮದ್ ಸರ್ಕಲ್ ಸಂಪೂರ್ಣ ಬಂದ್ ಮಾಡಲಾಗಿದೆ. ಗೋಪಿ ವೃತ್ತದಲ್ಲೂ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆಗೆ ಹೋಗುವ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಮಹಾವೀರ ಸರ್ಕಲ್’ನಲ್ಲೂ ಬ್ಯಾರಿಕೇಡುಗಳನ್ನು ಅಳವಡಿಸಲಾಗಿದೆ. ಇದೇ ರೀತಿ ಎಲ್ಲ ರಸ್ತೆ, ಸರ್ಕಲ್’ಗಳಲ್ಲೂ ಬ್ಯಾರಿಕೇಡ್ ಅಳವಡಿಸಲಾಗಿದೆ.
ತುರ್ತು ಸೇವೆಗಳಿಗೆ ಇದೆ ಅನುಮತಿ
ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಜನ ಸಂಚಾರ ತಡೆಯುವ ಸಲುವಾಗಿ ಸೆಕ್ಟರ್ ಲಾಕ್’ಡೌನ್ ಮಾಡಲಾಗುತ್ತಿದೆ. ಆಯಾ ಬಡಾವಣೆ ಜನರು ಅಲ್ಲಿಯೇ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಮತ್ತೊಂದು ಬಡಾವಣೆಗೆ ಹೋಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ತರಕಾರಿ, ದಿನಸಿ ಸೇರದಿಂತೆ ಎಲ್ಲ ಅಗತ್ಯ ವಸ್ತುಗಳ ಅಂಗಡಿಗಳ ಬಾಗಿಲನ್ನು ತೆಗೆಯಲು ಅನುಮತಿ ನೀಡಲಾಗಿದೆ.
ತುರ್ತು ಸೇವೆ, ಅಗತ್ಯ ಸೇವೆ ಒದಗಿಸುವವರಿಗೆ ಸೆಕ್ಟರ್ ಲಾಕ್’ಡೌನ್’ನಿಂದ ವಿನಾಯಿತಿ ನೀಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]