ನೆಹರು ರಸ್ತೆಯಲ್ಲಿ ಸರಣಿ ಕಳ್ಳತನ, ಬ್ರಾಂಡೆಡ್‌ ಶೂ, ಚಪ್ಪಲಿ ಹೊತ್ತೊಯ್ದ ಖದೀಮರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 AUGUST 2023

SHIMOGA : ನೆಹರೂ ರಸ್ತೆಯಲ್ಲಿ ಅಂಗಡಿಗಳ ಸರಣಿ ಕಳ್ಳತನವಾಗಿದ್ದು (SERIAL THEFT), ದುಬಾರಿ ಬೆಲೆಯ ಬ್ರಾಂಡೆಡ್‌ ಶೂ, ಚಪ್ಪಲಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಹರು ರಸ್ತೆಯಲ್ಲಿರುವ ಬ್ಲಾಕ್‌ ಶೂ ಅಂಗಡಿಯಲ್ಲಿ ಕಳ್ಳತನವಾಗಿದೆ (SERIAL THEFT). ಎಂದಿನಂತೆ ರಾತ್ರಿ 10 ಗಂಟೆಗೆ ಅಂಗಡಿ ಬಂದ್‌ ಮಾಡಿ ತೆರಳಿದ್ದರು. ಮರುದಿನ ಬೆಳಗ್ಗೆ ಬಂದು ಬಾಗಿಲು ತೆಗೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಾತ್‌ ರೂಂನ ಗ್ರಿಲ್‌ ಕಟ್‌ ಮಾಡಿ ಕಳ್ಳರು ಒಳ ನುಗ್ಗಿದ್ದಾರೆ. ಪೂಮಾ ಕಂಪನಿಯ 9 ಸಾವಿರ ರೂ. ಮೌಲ್ಯದ ಶೂ, ಸ್ಪಾರ್ಕ್ಸ್‌ ಕಂಪನಿಯ 1400 ರೂ. ಬೆಲೆಯ ಶೂ, ಪೂಮಾ ಕಂಪನಿಯ 3300 ರೂ. ಮೊತ್ತದ ಚಪ್ಪಲಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಅಲ್ಲದೆ ಡ್ರಾದಲ್ಲಿದ್ದ 200 ರೂ. ನಗದು ಕಾಣೆಯಾಗಿದೆ.

ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂದೆ ಕಿರಿಕ್‌, ಆಟೋ ಚಾಲಕನ ಮೂಗು, ಕಣ್ಣಿಗೆ ಪಂಚ್‌, ಕಿತ್ತಾಟಕ್ಕೆ ಕಾರಣವೇನು?

ಬ್ಲಾಕ್‌ ಶೂ ಅಂಗಡಿ ಪಕ್ಕದ ಬಂಡಿಗಡಿ ಟ್ರೇಡರ್ಸ್‌ ಪೇಂಟ್‌ ಅಂಗಡಿಯಲ್ಲಿ 4 ಸಾವಿರ ರೂ. ನಗದು, ಸುಭಾಷಿತ್‌ ಬಟ್ಟೆ ಅಂಗಡಿಗು ಕಳ್ಳರು ನುಗ್ಗಿದ್ದಾರೆ. ಬಟ್ಟೆ ಚಲ್ಲಾಪಿಲ್ಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

PARISHRAMA NEET ACADEMY

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment