ಶಿವಮೊಗ್ಗ LIVE
ಶಿವಮೊಗ್ಗ: ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (95) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಉದ್ಯಮ, ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಿಗೆ ಶಿವಮೊಗ್ಗದ (Shivamogga) ಜೊತೆಗೆ ಉತ್ತಮ ನಂಟು ಇತ್ತು.
ಶಾಮನೂರು ಶಿವಶಂಕರಪ್ಪ ಅವರಿಗೆ ಶಿವಮೊಗ್ಗದಲ್ಲಿ ವ್ಯಾವಹಾರಿಕ ಸಂಬಂಧವಿತ್ತು. ಸ್ನೇಹಿತರ ಬಳಗವಿದೆ. ಶಿಷ್ಯವರ್ಗವು ಇದೆ. ಇದರ ಜೊತೆಗೆ ಕೌಟುಂಬಿಕ ಸಂಬಂಧವು ಇದೆ. ಹಾಗಾಗಿ ಶಿವಮೊಗ್ಗಕ್ಕೆ ಅವರು ಆಗಾಗ ಬಂದು ಹೋಗುತ್ತಿದ್ದರು.
ಶಿವಮೊಗ್ಗದ ನಂಟು, ಇಲ್ಲಿದೆ 4 ಪ್ರಮುಖಾಂಶ
ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಅವರು ಶಾಮನೂರು ಶಿವಶಂಕರಪ್ಪ ಅವರ ಗರಡಿಯಲ್ಲಿದ್ದವರು. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಎಸ್.ಪಿ.ದಿನೇಶ್, ಶಾಮನೂರು ಶಿವಶಂಕರಪ್ಪ ಅವರಿಗಿದ್ದ ಶಿವಮೊಗ್ಗದ ನಂಟು ವಿವರಿಸಿದ್ದಾರೆ. ಅದರ ಪಾಯಿಂಟ್ಸ್ ಇಲ್ಲಿದೆ.

ಪಾಯಿಂಟ್ 1: ಶಾಮನೂರು ಶಿವಶಂಕರಪ್ಪ ಅವರು ರೈಸ್ ಮಿಲ್ ಮಾಲೀಕರಾಗಿದ್ದರು. ಆದ್ದರಿಂದ ಶಿವಮೊಗ್ಗದ ರೈಸ್ ಮಿಲ್ ಮಾಲೀಕರ ಜೊತೆಗೆ ವ್ಯವಹಾರವಿತ್ತು. ನಂಜಪ್ಪ ಆಸ್ಪತ್ರೆಯ ಮಾಲೀಕರಾದ ಬೆನಕಪ್ಪ, ಜಯದೇವ ರೈಸ್ ಮಿಲ್ನ ರುದ್ರಣ್ಣ ಸೇರಿದಂತೆ ಹಲವರು ಅವರ ಆತ್ಮೀಯರಾಗಿದ್ದರು.
ಪಾಯಿಂಟ್ 2: ಶಿವಮೊಗ್ಗದಲ್ಲಿ ಹಲವು ಒಡನಾಡಿಗಳಿದ್ದರು. ಹಲವು ಶಿಷ್ಯರನ್ನು ಹೊಂದಿದ್ದರು. ಎಸ್.ಪಿ.ಜಗನ್ನಾಥ್ ಅವರು ಶಾಮನೂರು ಶಿವಶಂಕರಪ್ಪ ಅವರ ಪರಮ ಶಿಷ್ಯರಾಗಿದ್ದರು. ಅವರ ಒಡನಾಡಿಗಳು, ಶಿಷ್ಯರ ಪೈಕಿ ನಾನು ಅತ್ಯಂತ ಕಿರಿಯ ವಯಸ್ಸಿನವನು ಎಂದು ಎಸ್.ಪಿ.ದಿನೇಶ್ ಸ್ಮರಿಸಿಕೊಂಡರು.
ಪಾಯಿಂಟ್ 3: ಸಚಿವರಾಗಿದ್ದ ಸಂದರ್ಭ ಶಿವಮೊಗ್ಗದಿಂದ ಯಾರೆ ಅವರ ಬಳಿ ಹೋದರು ಇಲ್ಲ ಎನ್ನದೆ ಕೆಲಸ ಮಾಡಿಕೊಡುತ್ತಿದ್ದರು. ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡುತ್ತಿದ್ದರು. ಸಮಾಜದ ವಿಚಾರವಾಗಿ ನಾವು ದೇಣಿಗೆ ಕೇಳಿದಾಗ ಎಂದಿಗೂ ಇಲ್ಲ ಎಂದಿರಲಿಲ್ಲ.
ಪಾಯಿಂಟ್ 4: ಶಾಮನೂರು ಶಿವಶಂಕರಪ್ಪ ಅವರ ತಾಯಿಯ ಸಹೋದರಿಯನ್ನು ಶಿವಮೊಗ್ಗ ತಾಲೂಕು ಬಿಲ್ಗುಣಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಹಾಗಾಗಿ ಚಿಕ್ಕಮ್ಮನ ಮನೆಗೆ ಆಗಾಗ ಬಂದು ಹೋಗುತ್ತಿದ್ದರು ಎಂದು ದಿನೇಶ್ ತಿಳಿಸಿದರು.
ಶಿವಮೊಗ್ಗದಲ್ಲಿ ಶಾಮನೂರು ಪವರ್
ಶಿವಮೊಗ್ಗದ ರಾಜಕಾರಣದಲ್ಲು ಶಾಮನೂರು ಶಿವಶಂಕರಪ್ಪ ಅವರ ಹೆಸರು ಆಗಾಗ ಪ್ರತ್ಯಕ್ಷವಾಗುತ್ತಿತ್ತು. ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸುವಲ್ಲಿ ನೆರವಾಗಿದ್ದರು. ಅದೇ ರೀತಿ ಬಂಗಾರಪ್ಪ, ಯಡಿಯೂರಪ್ಪ ಕುಟುಂಬದೊಂದಿಗೆ ಒಡನಾಟವಿತ್ತು.
ಕಳೆದ ಲೋಕಸಭೆ ಚುನಾವಣೆಗು ಮುನ್ನ ಶಾಮನೂರು ಶಿವಶಂಕರಪ್ಪ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ‘ಸಂಸದ ರಾಘವೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪುನರಾಯ್ಕೆ ಮಾಡಿʼ ಎಂದು ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.ಚರ್ಚೆ ಹೊಟ್ಟಿಸಿದ್ದ ‘ಶಹಬ್ಬಾಸ್ʼ

ಮಠಗಳು, ಮಠಾಧೀಶರ ಜೊತೆಗೆ ನಂಟು
ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದರು. ಹಾಗಾಗಿ ಶಿವಮೊಗ್ಗದ ವೀರಶೈವ ಲಿಂಗಾಯತ ಮಠಗಳು, ಮಠಾಧೀಶರ ಜೊತೆಗೆ ಅವರು ನಂಟು ಹೊಂದಿದ್ದರು. ಮಠಗಳಲ್ಲಿನ ಕಾರ್ಯಕ್ರಮಗಳಲ್ಲು ಭಾಗವಹಿಸಿದ್ದರು.
ಇದನ್ನೂ ಓದಿ » ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
ಶಾಮನೂರು ನಿಧನಕ್ಕೆ ಸಂತಾಪ
ಇನ್ನು, ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ. ಯಾರೆಲ್ಲ ಏನೆಲ್ಲ ಹೇಳಿದ್ದಾರೆ. ಇಲ್ಲಿದೆ ಡಿಟೇಲ್ಸ್
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






